ಮಂಗಳೂರು:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ಷಿತಿಜಗಳನ್ನು ಅನ್ವೇಷಿಸುವ ಮತ್ತು ಮುಂದಿನ ಬೆಳವಣಿಗೆಗೆ ಹೊಸ ಚಿಂತನೆಗಳನ್ನು ಅರಸುವ ಸಲುವಾಗಿ ಮಂಗಳೂರಿನ ಎಂ.ಸಿ.ಸಿ.ಬ್ಯಾಂಕ್ ಚಿಂತನಾ ಶೃಂಗ 2025ನ್ನು ಆಯೋಜಿಸಿತ್ತು.
ಅತ್ತಾವರದ ಹೊಟೇಲ್ ಅವತಾರ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು.
ಸಭೆಯಲ್ಲಿ ಎಂ.ಸಿ.ಸಿ. ಬ್ಯಾಂಕಿನ ಬೆಳವಣಿಗೆಯ ಮಾಹಿತಿಯನ್ನು ಪ್ರಸ್ತುತಪಡಿಸಲಾಯಿತು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಅವರು ಬ್ಯಾಂಕ್ ಕಳೆದ ಒಂದು ಶತಮಾನದಲ್ಲಿ ಸಾಗಿ ಬಂದ ಪ್ರಯಾಣವನ್ನು ಉಲ್ಲೇಖಿಸಿದರು. ಕಳೆದ ಏಳು ವರ್ಷಗಳಲ್ಲಿ ಸಾಧಿತವಾದ ತ್ವರಿತಗತಿಯ ಪ್ರಗತಿ ಮುಂದೆಯೂ ಮುಂದುವರಿಯಬೇಕು ಎಂದರು.
ಬ್ಯಾಂಕ್ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳ ಬೇಕು ಎಂದೂ ಅವರು ಸಲಹೆ ಮಾಡಿದರು.
ಮಂಗಳೂರು ಬಿಷಪ್ ರೆವೆರೆಂಡ್ ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿ ಗುಣ ಮಟ್ಟದ ಮತ್ತು ನಗುಮೊಗದ ಸೇವೆ ಇದ್ದರೆ ಗ್ರಾಹಕರು ಹೆಚ್ಚುತ್ತಾರೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಮೈಕೆಲ್ ಡಿಸೋಜಾ ಬ್ಯಾಂಕಿನ ದೀರ್ಘ ಕಾಲೀನ ಯೋಜನೆಗೆ ಇಂತಹ ಚಿಂತನ ಕಾರ್ಯಕ್ರಮಗಳು ಹೊಸ ನೋಟವನ್ನು ಒದಗಿಸುತ್ತವೆ ಎಂದರು.
ಅಧ್ಯಕ್ಷ ಭಾಷಣ ಮಾಡಿದ ಸಹಕಾರ ರತ್ನ ಅನಿಲ್ ಲೋಬೋ ಬಂದಿರುವ ಸಲಹೆ ಸೂಚನೆಗಳು ಬಹಳ ಉಪಯುಕ್ತವಾದಂತಹವು ಎಂದು ಶ್ಲಾಘಿಸಿದರು.
ಮ್ಯಾಕ್ಸಿಂ ಫೆರ್ನಾಂಡೀಸ್, ಡಾ.ಅಲೋಶಿಯಸ್ ಸಿಕ್ವೇರಾ, ಎಲ್. ಅರ್ಹಾನ್ನ, ಅಲೆನ್ ಪಿರೇರಾ, ಫೌಸ್ಟಿನ್ ಲೋಬೋ, ಡಾ. ವಿನ್ಸೆಂಟ್ ಆಳ್ವಾ , ಪೀಯುಸ್ ರೋಡ್ರಿಗಸ್, ಅಲ್ವಿನ್ ಕ್ರಾಸ್ಟಾ, ಮತ್ತಿತರರು ಪಾಲ್ಗೊಂಡಿದ್ದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…