ಬಂಟ್ವಾಳ: ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ನೇತ್ರಾವತಿ ನದಿ ಪಾತ್ರದ ಸರಪಾಡಿ, ಮಣಿನಾಲ್ಕೂರು ಗ್ರಾಮದ ಒಂದಷ್ಟು ಅಡಿಕೆ ತೋಟಗಳಿಗೆ ನೀರು ನುಗ್ಗಿರುವ ಜತೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಜು. ೨೬ರಿಂದಲೂ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ಬಂಟ್ವಾಳದಲ್ಲಿ ನೀರಿನ ಮಟ್ಟ ೭.೪ ಮೀ. ಕಂಡುಬಂದಿತ್ತು. ಈ ಭಾಗದಲ್ಲಿ ಅಪಾಯಕಾರಿ ಮಟ್ಟ ೮ ಮೀ. ಆಗಿದ್ದು, ಸದ್ಯಕ್ಕೆ ಅಪಾಯಕಾರಿ ಇಲ್ಲವಾಗಿದೆ.
ಮಳೆಯ ಜತೆ ಜೋರಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ.



