ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಉಡುಪಿ ಇದರ ಉದ್ಘಾಟನಾ ಸಮಾರಂಭ ಆದಿ ಉಡುಪಿ ಮಸ್ಜಿದೆ ನೂರುಲ್ ಇಸ್ಲಾಮ್ ಆವರಣದಲ್ಲಿ ನಡೆದಿದೆ.

ಕಚೇರಿಯನ್ನು ನೂರುಲ್ ಇಸ್ಲಾಂ ಮಸೀದಿಯ ಅಧ್ಯಕ್ಷರಾದ ಜನಾಬ್ ಆಸೀಫ್ ಇಕ್ಬಾಲ್ ಉದ್ಘಾಟಿಸಿದ್ದಾರೆ. ಕಛೇರಿ ಉದ್ಘಾಟನೆ ಎನ್ನುವುದು ಕೇವಲ ಒಂದು ಕಟ್ಟಡದ ತೋರ್ಪಡಿಕೆ ಮಾತ್ರವಲ್ಲ, ಅದು ನಮ್ಮ ಸಮಾಜದ ಉದ್ದೇಶಗಳು,ನಂಬಿಕೆಗಳು ಹಾಗೂ ಸೇವಾಭಾವನೆಯ ಸಂಕೇತವಾಗಿದೆ ಎಂದು ಗಣ್ಯರು ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌ಎನ್‌ಒ ಉಡುಪಿ ತಾಲೂಕು ಘಟನಕದ ಅಧ್ಯಕ್ಷರಾದ ಜನಾಬ್ ನಜೀರ್ ನೆಜಾರ್ ವಹಿಸಿದ್ರು.

ಇನ್ನು ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ (ರಿ.) ಇದರ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ಮೂಡಬಿದ್ರೆ, ಎನ್‌ಎನ್‌ಒ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಜನಾಬ್ ಮುಸ್ತಾಕ್ ಅಹ್ಮದ್ ಬೆಳ್ವೆ, ನಮ್ಮ ನಾಡ ಒಕ್ಕೂಟ (ರಿ.) ಇದರ ಪ್ರಧಾನ ಕಾರ್ಯದರ್ಶಿಯಾದ ಮೌಝಮಿರ್ ಅಹ್ಮದ್ ರಶಾದಿ,ಖಜಾಂಚಿ ಜನಾಬ್ ಪೀರು ಭಾಯ್,ಸಂಘಟನಾ ಕಾರ್ಯದರ್ಶಿ ಜನಾಬ್ ಹುಸೈನ್ ಹೈಕಾಡಿ, ಜಿಲ್ಲಾ ಅಧ್ಯಕ್ಷರಾದ ಜನಾಬ್ ಮುಸ್ತಾಕ್ ಬೆಳ್ವೆ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಜನಾಬ್ ಝಹೀರ್ ನಾಖುದ, ಜಿಲ್ಲಾ ಖಜಾಂಚಿ ಜನಾಬ್ ನಕ್ವಾ ಯಾಹ್ಯಾಯ್, ಜನಾಬ್ B.M.Zaffer ದುಬೈ , ಜನಾಬ್G.Sadiq ದುಬೈ, ಜನಾಬ್ Nazeer Al Falaha ಜುಬೈಲ್ KSA, ಜನಾಬ್ ASRAF KUWAIT , ಉಡುಪಿ ತಾಲೂಕ ಸಮಿತಿಯ ಅಧ್ಯಕ್ಷರಾದ ಜನಾಬ್ ನಝೀರ್ ನೇಜರ್, ಕಾರ್ಯದರ್ಶಿ ಸಾದಿಕ್ ಉಸ್ತಾದ್, NNO ಕಮ್ಯೂನಿಟಿ ಸೆಂಟರ್ನ ಅಧ್ಯಕ್ಷರಾದ ಜನಾಬ್ ಇಬದುಲ್ಲಾ ಉಸ್ಮಾನ್,ಖಜಾಂಚಿ ಜನಾಬ್ B.ಸುಲೈಮಾನ್, ರಾತ್ರಿ ಹಗಲು ಇದರ ಬಗ್ಗೆ ದುಡಿದ ಫಾಝಿಲ್ ಆದಿಉಡುಪಿ ಮತ್ತು ತಂಡದವರು, ಆದಿಉಡುಪಿ ಮಸೀದಿಯ ಅಡಳಿತ ಮಂಡಳಿಯವರು, ಸಮುದಾಯದ ಮುಖಂಡರು,ಊರಿನ ಗಣ್ಯರು ಸೇರಿದಂತೆ ಒಕ್ಕೂಟ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಕಛೇರಿ ಉದ್ಘಾಟನೆ ಎನ್ನುವುದು ಕೇವಲ ಒಂದು ಕಟ್ಟಡದ ತೋರ್ಪಡಿಕೆ ಮಾತ್ರವಲ್ಲ, ಅದು ನಮ್ಮ ಸಮಾಜದ ಉದ್ದೇಶಗಳು,ನಂಬಿಕೆಗಳು ಹಾಗೂ ಸೇವಾಭಾವನೆಯಸಂಕೇತವಾಗಿದೆ.



