ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ವಿಟ್ಲದ ಕೆದಿಲ ಗ್ರಾಮದ ಮುರುವ ಎಂಬಲ್ಲಿ ಧರೆಕುಸಿದು ನೀರುಹರಿಯುವ ತೋಡಿಗೆ ಬಿದ್ದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ.

ವಿಟ್ಲ: ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಅಲ್ಲಲ್ಲಿ ಹಾನಿಗಳು ಸಂಭವಿಸಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲದ ಕೆದಿಲ ಗ್ರಾಮದ ಮೂರುವ ಎಂಬಲ್ಲಿ ಭೂಕುಸಿದು ತೋಡಿಗೆ ಬಿದ್ದ ಹಿನ್ನಲೆಯಲ್ಲಿ ತೋಟಗಳು, ಗದ್ದೆಗಳು ಜಲಾವೃತಗೊಂಡಿದೆ. ಮುರುವ ನಿವಾಸಿ ಮೋನಪ್ಪ ಗೌಡ ಎಂಬುವವರ ಒಡೆತನದ ಭೂಮಿಗೂ ಮಣ್ಣು ಬಿದ್ದಿದೆ. ತೋಡಿಗೆ ಮಣ್ಣು ಬಿದ್ದ ಕಾರಣ ನೀರು ಹರಿದು ಹೋಗಲು ಜಾಗವಿಲ್ಲದೆ, ಹತ್ತಿರದ ತೋಟ ಗದ್ದೆಗೆ ನುಗ್ಗಿದೆ.
ಸ್ಥಳೀಯರು ತೋಡಿಗೆ ಬಿದ್ದಿರುವ ಮಣ್ಣನ್ನು ತೆಗೆದು ನೀರು ಹರಿಸು ಹೋಗುವಂತೆ ಮಾಡಿದ್ದಾರೆ.



