ನಿಂತಿದ್ದ ಲಾರಿಗೆ ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಹದಿನೈದು ಮಂದಿ ಗಾಯಗೊಂಡ ದಾರುಣ ಘಟನೆ ಶಿವಮೊಗ್ಗ ಸಮೀಪದ ಗಾಜನೂರು ಬಳಿ ಸಂಭವಿಸಿದೆ.

ನಿಂತಿದ್ದ ಲಾರಿಗೆ ರಿಫ್ಲೆಕ್ಟರ್ ಕೂಡಾ ಇಲ್ಲದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಳ್ಳಕೆರೆಯ ಹರ್ಷಿತ್ ಮತ್ತು ಬಸ್ ನಿರ್ವಾಹಕ ಅಣ್ಣಪ್ಪ ಮೃತಪಟ್ಟಿದ್ದಾರೆ. ಅಣ್ಣಪ್ಪ ಅವರು ಇತ್ತೀಚೆಗಷ್ಟೇ ನಿರ್ವಾಹಕರಾಗಿ ಸೇರಿಕೊಂಡಿದ್ರು. ಅಪಘಾತದಲ್ಲಿ ಇತರ ಹದಿನೈದು ಮಂದಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.



