ಜನ ಮನದ ನಾಡಿ ಮಿಡಿತ

Advertisement

ಬಸ್ ಚಾಲಕರಿಗೆ ಜವಾಬ್ದಾರಿ ಮೈಗೂಡಬೇಕಿದೆ || ಅತಿಯಾದ ವೇಗಕ್ಕೆ ಬೀಳಲಿ ಬ್ರೇಕ್

ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಬಸ್ ಗಳ ಅಪಘಾತ ಪ್ರಮಾಣ ದಿನೇ ದಿನೇ ಹೆಚ್ಚುತಿದೆ.

ಸರಕಾರಿ ಮತ್ತು ಖಾಸಗಿ ಎರಡೂ ಬಸ್ ಗಳ ಚಾಲಕರ ಬೇಜವಾಬ್ದಾರಿತನದ ಚಾಲನೆಯಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಮಯ ಸರಿಹೊಂದಿಸಲು ಅತೀ ವೇಗದಲ್ಲಿ ಬಸ್ ಚಲಾಯಿಸಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವುದು ಕೆಲವು ಬಸ್ ಚಾಲಕರಿಗೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕಳೆದ ವರ್ಷದ ಒಂದು ಆಘಾತಕಾರಿ ವರದಿಯ ಪ್ರಕಾರ ರಾಜ್ಯದಲ್ಲಿ 300 ಕ್ಕೂ ಹೆಚ್ಚು ಸರಕಾರಿ ಬಸ್ಸುಗಳು ಅಪಘಾತಕ್ಕಿದಾಗಿದ್ದು ಅದರಲ್ಲಿ ಸುಮಾರು 150 ಜನ ಮೃತಪಟ್ಟಿದ್ದಾರೆ. ಇಲ್ಲಿನ ಬಹುತೇಕ ಪ್ರಕರಣಗಳಲ್ಲಿ ಬಸ್ ಚಾಲಕರ ಬೇಜವಾಬ್ದಾರಿತನದ ಚಾಲನೆ ಮತ್ತು ಅತಿಯಾದ ವೇಗವೇ ಅಪಘಾತಕ್ಕೆ ಮೂಲ ಕಾರಣ ಎಂಬುದು ಮತ್ತೊಂದು ವಿಪರ್ಯಾಸ. ಬಸ್‌ಗಳ ಓವರ್ ಸ್ಪೀಡ್ ನಿಂದ ಕೆಲವೊಮ್ಮೆ ವಿರುದ್ದ ದಿಕ್ಕಿನಲ್ಲಿ ಬರುವ ವಾಹನ ಸವಾರರು ಕೂಡ ತಮ್ಮ ಯಾವುದೇ ತಪ್ಪಿಲ್ಲದೆ ಅಪಘಾತಕ್ಕೆ ತುತ್ತಾಗುತ್ತಾರೆ. ಬಸ್‌ನಂತಹ ರಕ್ಕಸ ಗಾತ್ರದ ವಾಹನವೊಂದು ಅತೀ ವೇಗದಲ್ಲಿ ಏಕಾಏಕಿ ಮೇಲೆರಗಿದರೆ ವಿರುದ್ದ ದಿಕ್ಕಿನಿಂದ ಬರುವ ಸವಾರಾದರೂ ಏನು ಮಾಡಲು ಸಾಧ್ಯ?. ಸಾರ್ವಜನಿಕ ಬಸ್ ಚಾಲಕರು ಜವಾಬ್ದಾರಿಯುತವಾಗಿ ಬಸ್ ಓಡಿಸುವುದು ಅಗತ್ಯ. ಕಾರಣ ಬಸ್ಸ್ ಓಡಿಸುವಾಗ ನೂರಾರು ಜನರ ಪ್ರಾಣ ಅವರ ಕೈಯಲ್ಲಿರುತ್ತದೆ. ಅವರ ವೈಯಕ್ತಿಕ ಲಾಭದ ನೆಪ ಹಿಡಿದು ಬಸ್ಸನ್ನು ವೇಗವಾಗಿ ಚಲಾಯಿಸಿ ಅಪಘಾತವೇನದಾರೂ ಸಂಭವಿಸಿದರೆ ಇವರ ವೈಯಕ್ತಿಕ ಲಾಭದ ದಾಹಕ್ಕೆ ನೂರಾರು ಜನ ಸಾರ್ವಜನಿಕರು ಬಲಿಯಾಗಬೇಕಾಗುತ್ತದೆ. ಓವರ್ ಸ್ಪೀಡ್ ನಿಂದ ಸಂಬವಿಸುತ್ತಿರುವ ಕೆಲವು ಬಸ್ ಅಪಘಾತಗಳ ಪರಿಣಾಮ ಸಾರ್ವಜನಿಕರು ತಮ್ಮ ಪ್ರಾಣ ಕೈಯಲ್ಲಿ ಹಿಡಿದು ಬಸ್ ನಲ್ಲಿ ಸಂಚರಿಸುವಂತಾಗಿದೆ.


ಇನ್ನು ಈ ಸೋಶಿಯಲ್ ಮೀಡಿಯಾ ಹಾವಳಿ ಜೋರಾಗುತ್ತಿದ್ದಂತೆ ಕೆಲವು ಬಸ್ ಚಾಲಕರ ರೀಲ್ಸ್ ಮಾಡುವ ಗೀಳು ಕೂಡ ಅತಿಯಾಗಿದೆ. ಸಾರ್ವಜನಿಕರು ಬಸ್ಸಿನಲ್ಲಿರುವಾಗಲೇ ಬಸ್‌ನಲ್ಲಿ ವಿಧವಿಧದ ಡ್ರೈವಿಂಗ್ ಸ್ಟಂಟ್ ಗಳನ್ನು ಪ್ರದರ್ಶಿಸಿ ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದೇ ಕೆಲವು ಬಸ್ ಚಾಲಕರ ದಿನಚರಿಯಾಗಿದೆ. ರೀಲ್ಸ್ ಮಾಡಲಿ ತಪ್ಪಲ್ಲ, ಆದರೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿ ರೀಲ್ಸ್ ಮಾಡುವ ಹುಚ್ಚಾಟ ದೂರವಾಗಲಿ. ಸಾರ್ವಜನಿಕರ ಜೀವದ ಭದ್ರತೆಯ ಹೊಣೆ ತಮ್ಮ ಮೇಲಿದೆ ಎಂಬುದನ್ನು ಅರಿತು ಪ್ರತಿಯೊಬ್ಬ ಬಸ್ ಚಾಲಕನೂ ಕಾರ್ಯ ನಿರ್ವಹಿಸಬೇಕು. ಸರಕಾರ ಕೂಡ ಬಸ್ ಚಾಲಕರ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕಿ, ಬಸ್‌ಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕುವಲ್ಲಿ ಕ್ರಮಗಳನ್ನು ಕೈ ಗೊಳ್ಳಬೇಕು. ಜೊತೆಗೆ ಬಸ್ ಮಾಲಕರು ಅಥವಾ ಸರಕಾರ ಬಸ್ ಚಾಲಕ ವೃತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳುವಾಗ ಸ್ವಲ್ಪ ಜವಾಬ್ದಾರಿ ಮೈಗೂಡಿರುವ ವಯಸ್ಸಿನಲ್ಲಿಹಿರಿಯರನ್ನೇ ಆರಿಸಿಕೊಳ್ಳುವುದು ಉತ್ತಮ. ಕಾರಣ ಇನ್ನೂ ಜವಾಬ್ದಾರಿ ಮೈಗೂಡದ ಬಿಸಿರಕ್ತದ ಯುವಕರ ಕೈಗೆ ಬಸ್ ಸಿಕ್ಕಿಬಿಟ್ಟರಂತೂ ಅವರು ಹೆಚ್ಚಿನ ಬಾರಿ ಅದನ್ನು ಆಟದ ವಸ್ತುವಿನಂತೆಯೇ ನಡೆಸಿಕೊಳ್ಳುತ್ತಾರೆ. ಅವರು ಬಸ್‌ನಲ್ಲಿ ನಡೆಸುವ ಬಗೆಬಗೆಯ ಸ್ಟಂಟ್‌ಗಳಿಗೆ ಸಾರ್ವಜನಿಕರು ತಮ್ಮ ಪ್ರಾಣ ಕೊಡಬೇಕಾಗುತ್ತದೆಯಷ್ಟೇ.

ಬಹುಷಃ ಜಗತ್ತಿನ ತುಂಬಾ ಸೂಕ್ಷ್ಮ ಮತ್ತು ಜವಾಬ್ದಾರಿಯುತ ವೃತ್ತಿಗಳ ಪೈಕಿ ಬಸ್ ಚಾಲಕರ ವೃತ್ತಿ ಕೂಡ ಒಂದು. ಪ್ರತಿಯೊಬ್ಬ ಸಾರ್ವಜನಿಕನ ಜೀವವೂ ನನ್ನ ಕೈಯಲ್ಲಿದೆ ಎಂದು ಭಾವಸಿಯೇ ಪ್ರತಿಯೊಬ್ಬ ಬಸ್ ಚಾಲಕ ಸ್ಟೇರಿಂಗ್ ಹಿಡಿಯುವಂತಾಗಬೇಕು. ಅತಿಯಾದ ವೇಗ, ಬೇಜವಾಬ್ದಾರಿತನ ಎಲ್ಲವನ್ನು ತೊರೆದು ಸಾರ್ವಜನಿಕರ ಹಿತಾಸಕ್ತಿಗೆ ಕಾರ್ಯನಿರ್ವಸುವಂತಾಗಬೇಕು.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!