ವಿಟ್ಲ ಧಾರ್ಮಿಕ ಶೃದ್ದಾ ಕೇಂದ್ರವೊAದಕ್ಕೆ ಸೇರಿದ್ದ ಕಾಣಿಕೆ ಡಬ್ಬಿಯಿಂದ ಹಣ ಕಳವು ಮಾಡಿದ ವಿಚಾರದಲ್ಲಿ ವಿಟ್ಲ ಠಾಣಾ ಪೋಲೀಸರ ತಂಡ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ವಿಟ್ಲ ಕಸಬಾ ಗ್ರಾಮದವರಾದ ನಿವಾಸಿ ತ್ವಾಹಿದ್ (19).ಉಮ್ಮರ್ ಫಾರೂಕ್(18) ಮತ್ತು ಮೊಹಮ್ಮದ್ ನಬೀಲ್ (18) ಬಂಧಿತ ಆರೋಪಿಗಳು. ಜುಲೈ 26 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ದೇಲಂತಬೆಟ್ಟು ಎಂಬಲ್ಲಿ ದೇಲಂತಬೆಟ್ಟು ಡಿ.ನಾರಾಯಣ ರಾವ್ ಅವರ ಅಧ್ಯಕ್ಷರಾಗಿರುವ ಧಾರ್ಮಿಕ ಶೃದ್ದಾ ಕೇಂದ್ರದ ಕಾಣಿಕೆ ಡಬ್ಬಿಯಿಂದ 15 ಸಾವಿರ ನಗದನ್ನು ಕಳವು ಮಾಡಿರುವ ಬಗ್ಗೆ ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.



