ಬೆಂಗಳೂರಿನಲ್ಲಿ ಕೆಲಸ ಇದೆ ಎಂದು ಹೇಳಿ ಮನೆಯಿಂದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಟಿದ್ದ ಯುವಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾಗಿದ್ದ ಯುವಕ 33ವರ್ಷದ ಮೊಹಮ್ಮದ್ ನಿಯಾಜ್ ದೇರಳಕಟ್ಟೆಯ ಎಸ್‌ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಗಸ್ಟ್ 2ರಂದು ತನ್ನ ತಾಯಿ ಹಾಜಿರ ಅವರಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದಾರೆ. ಅದೇ ದಿನ ಮಧ್ಯಾಹ್ನ ಪತ್ನಿಗೆ ಕರೆ ಮಾಡಿ ಕಂಕನಾಡಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ. ನೀನು ರೆಡಿಯಾಗಿರು ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ನಂತರ ಪತ್ನಿ ಮೊಹಮ್ಮದ್ ನಿಯಾಜ್‌ನಿಗೆ ಫೋನ್ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ ಯುವಕನ ಕುಟುಂಬದವರು ಆತನ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಆದರೆ ಆತನ ಸುಳಿವು ಸಿಗದ ಕಾರಣ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಕ್ರಮಕೈಗೊಂಡಿದ್ದಾರೆ.



