ಅಕ್ರಮವಾಗಿ ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ ಕೆಂಪು ಕಲ್ಲು ಸಾಗಿಸುವ ವೇಳೆ ವಿಟ್ಲ ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದ್ದು, ಕೆಂಪು ಕಲ್ಲು ಸಹಿತ ಲಾರಿ ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಿಟ್ಲ ನಿವಾಸಿ ಮಹಮ್ಮದ್ ಮುಸ್ತಾಫ ಹಾಗೂ ಉಕ್ಕುಡ ನಿವಾಸಿ ಸಲಾಂ ಮತ್ತು ಧರ್ಮತ್ತಡ್ಕ ನಿವಾಸಿ ಅಶ್ರಫ್ ಎಂಬವರ ಮೇಲೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 7,500 ರೂಪಾಯಿ ಮೌಲ್ಯದ 270 ಕೆಂಪು ಕಲ್ಲು ಸಹಿತ ಸಾಗಾಟಕ್ಕೆ ಬಳಸಿದ 12ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



