ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ನಗರಸಭಾ ವ್ಯಾಪ್ತಿಯ ಮುಕ್ಕಚ್ಚೇರಿ ಎಂಬಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಯಕರ ಎಂಬುವವರ ವಾಸ್ತವ್ಯಮನೆ ಕುಸಿದು ಗೋಡೆ ಬಿರುಕು ಬಿಟ್ಟಿದ್ದು, ತೀವ್ರ ಹಾನಿಯಾಗಿದೆ. ಅಬ್ದುಲ್ ಖಾದರ್ ಅವರ ಮನೆ ಕಾಂಪೌಂಡ್ ಕೂಡಾ ಕುಸಿದು ಬಿದ್ದಿದೆ. ವಿಪರೀತ ಗಾಳಿ ಮಳೆಯಿಂದಾಗಿ ಕೆಲವು ಕಡೆ ಮರದ ಗೆಲ್ಲು ಬಿದ್ದು ವಿದ್ಯುತ್ ಸಂಪರ್ಕ ಕಡಿದಿದ್ದು, ಇದರಿಂದ ನಗರ ಸಭಾ ವ್ಯಾಪ್ತಿಯ ಪಟ್ಲ, ಗಂಡಿ, ಮುಡಿಪೋಡಿ ಮುಂತಾದ ಕಡೆಗಳಲ್ಲಿ ವಿದ್ಯುತ್ ಇಲ್ಲದೇ ಕಳೆದೆರಡು ದಿನಗಳಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ವಿಪರೀತ ಮಳೆಗೆ ಗಂಡಿ, ಪಟ್ಲ ಸಹಿತ ಕೆಲವು ಕಡೆ ವಿದ್ಯುತ್ ಕಡಿತಗೊಂಡಿದೆ.



