ಮಂಗಳೂರು: ಕೊಡಗು ಜಿಲ್ಲೆಯ ವೀರಾಜಪೇಟೆ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ವಕೀಲ ಹಾಗು ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಆಯ್ಕೆ ಸಭೆ ನಭೆಯಿತು.

ಮಾಜಿ ಅಧ್ಯಕ್ಷ ಎನ್. ಗೋಪಾಲಕೃಷ್ಣ ಕಾಮತ್ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಉಪಾಧ್ಯಕ್ಷರಾಗಿ ಜೆ.ಎನ್.ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎನ್. ನರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿಯಾಗಿ ವಿ.ಎಂ.ಪುರುಷೋತ್ತಮ್, ಖಜಾಂಚಿಯಾಗಿ ಮಾಳೇಟಿರ ಸಾಬ ಮುತ್ತಪ್ಪ ಆಯ್ಕೆಯಾದರು.
ಕೆ.ಜಿ.ಅರುಣಕುಮಾರ್, ಸುಮಂತ ಜೈನ್, ಎ.ಕೆ.ರವಿಶಂಕರ, ಬಿ. ಎ. ಅಂಬಿ ಕೃಷ್ಣಮೂರ್ತಿ, ಡಾ.ಎನ್. ವೀರೇಂದ್ರ ಕಾಮತ್, ಕುಪ್ಪಂಡ ರಾಜೀವ್ ಕಾರ್ಯಪ್ಪ, ಎನ್. ವೆಂಕಟೇಶ ಕಾಮತ್, ಜೆ.ಪಿ.ಅರುಣ್ , ಜೆ. ವಿ.ಪ್ರಕಾಶ್, ಪಟ್ಟಡ ವಿಕ್ರಂ, ಕಂಡ್ರತಂಡ ಟಿ.ಮುತ್ತಣ್ಣ, ಮನೆಯಪಂಡ ರಿನ್ ಕಾಳಪ್ಪ, ಗಂಗಾಧರಯ್ಯ, ಡಾ. ಬಿ.ಪಿ. ಕೇಶವ ರಾವ್, ಪಿ.ಜಿ.ಅಯ್ಯಪ್ಪ, ದಿಲೀಪ್ ಕುಮಾರ್ ಜೈನ್, ಪ್ರವೀಣ್ ಕುಮಾರ್ ಜೈನ್ ಅವರು ಸದಸ್ಯರಾಗಿ ಆಯ್ಕೆಯಾದರು.
ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಭಟ್ ಅವರನ್ನು ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ಜರಗುವ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.



