ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಜಗನ್ನಾಥ ಶೆಟ್ಟಿ ಅವರು ಸಹಾಯಕ ನಿರೀಕ್ಷಕರಾಗಿ ಮುಂಬಡ್ತಿ ಹೊಂದಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

1997 ರಲ್ಲಿ ಪೋಲೀಸ್ ಇಲಾಖೆಗೆ ಸೇರಿದ ಇವರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998 ರಲ್ಲಿ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಬಳಿಕ ಮಂಗಳೂರು ರೌಡಿ ನಿಗ್ರಹ ದಳದಲ್ಲಿ ಸೇವೆ, ಬಂಟ್ವಾಳ ವೃತ್ತ ನಿರೀಕ್ಷಕರ ಕಚೇರಿ, ಉಪ್ಪಿನಂಗಡಿ ಪೋಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ, ಮಂಗಳೂರು ಹೆಚ್ಚುವರಿ ಪೋಲೀಸ್ ಅಧೀಕ್ಷಕರ ಕಚೇರಿ, ಐಎಸ್‌ಡಿ ಬಂಟ್ವಾಳ ಹೀಗೆ ಇಷ್ಟು ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಹೆಚ್.ಸಿ.ಯಾಗಿ ಮುಂಬಡ್ತಿ ಹೊಂದಿದ ಇವರು ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಗೆ ವರ್ಗಾವಣೆಯಾದರು, ಬಳಿಕ ಅರಣ್ಯಸಂಚಾರಿ ಇಲಾಖೆ ಮಂಗಳೂರು, ಎಸ್. ಪಿ.ಕಚೇರಿಯ ವಿಶೇಷ ವಿಭಾಗ, ಬಂಟ್ವಾಳ ನಗರ ಪೋಲೀಸ್ ಠಾಣೆ, ಇದೀಗ ಡಿ.ವೈಎಸ್.ಪಿ.ಕಚೇರಿಯಿಂದ ಎಎಸ್‌ಐಯಾಗಿ ಮುಂಬಡ್ತಿಯಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.



