ಅಕ್ರಮವಾಗಿ ಗೋ ಸಾಗಾಟವನ್ನು ಹಿಂದೂ ಕಾರ್ಯಕರ್ತರು ಪತ್ತೆ ಮಾಡಿದ ಘಟನೆ ಗುರುವಾಯನಕೆರೆಯಲ್ಲಿ ಸಂಭವಿಸಿದೆ.

ಇನ್ನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಸಾಗಾಟ ಮಾಡುತ್ತಿದ್ದಾಗ, ಬೆಳ್ತಂಗಡಿ ಗುರುವಾಯನಕೆರೆ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ. ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದರಿಂದ ದನಗಳು ಅಸ್ವಸ್ಥಗೊಂಡ ರೀತಿಯಲ್ಲಿತ್ತು. ಅಕ್ರಮ ಗೋಸಾಗಾಟ ಮಾಡುತಿದ್ದ ಮೂವರ ಪೈಕಿ,ಇಬ್ಬರು ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



