ಪುತ್ತೂರು ನಗರಸಭೆ ಬೈಲಾ ಪ್ರಕಾರ ಯಾವುದೆ ಉದ್ದಿಮೆ ಪರವಾನಿಗೆಯ ಊರ್ಜಿತ ಅವಧಿಯು ಪ್ರತೀ ವರ್ಷದ ಮಾರ್ಚ್ ಅಂತ್ಯದವರೆಗೆ ಇರುತ್ತದೆ.

ಆ ನಂತರ ನವೀಕರಣ ಮಾಡದೇ ಇದ್ದಲ್ಲಿ ಅಂತಹ ಉದ್ದಿಮೆ ಪರವಾನಿಗೆ ರದ್ದಾಗುವುದು ಎಂಬ ಉಲ್ಲೇಖವಿದೆ. ಆದರೆ ನಗರಸಭೆ ಅಧಿಕಾರಿಗಳು ಉದ್ಯಮ ಸ್ಥಗಿತಗೊಳಿಸಿದವರಿಗೂ ಪರವಾನಿಗೆ ಶುಲ್ಕ ಕಟ್ಟಬೇಕೆಂಬ ನೋಟೀಸ್ ನೀಡಿರುವುದು ಕಾನೂನು ಬಾಹಿರವಾಗಿದೆ. ಹಾಗಾಗಿ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ನಗರಸಭೆಯಿಂದ ನೀಡಿರುವ ಶುಲ್ಕದ ನೋಟೀಸ್ ಅನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರ ನೇತೃತ್ವದ ನಿಯೋಗ ನಗರಸಭೆ ಅಧ್ಯಕ್ಷರಿಗೆ ಮತ್ತು ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.



