ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ಫರಂಗಿಪೇಟೆ ಇವರ ವತಿಯಿಂದ 79 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಎಸ್. ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ‍್ಯ ಬಗ್ಗೆ ಮಾತನಾಡಿದರು. ಖತೀಬ್ ಉಸ್ತಾದ್ ಝಕರಿಯ್ಯಾ ದಾರಿಮಿ ದುಃವಾ ನೆರವೇರಿಸಿ ಮಾತನಾಡಿದರು. ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ಸದರ್ ಮುಅಲ್ಲಿಮರಾದ ಇಸ್ಮಾಯಿಲ್ ಹನೀಫಿ ಸ್ವಾಗತ ಭಾಷಣ ಮಾಡಿದರು ಮದ್ರಸಾ ವಿಧ್ಯಾರ್ಥಿಗಳಾದ ಹಯಾನ್ ಹಾಗು ತಂಡ ದೇಶ ಭಕ್ತಿ ಹಾಗು ಸಂದೇಶ ಭಾಷಣ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿ ಕೋಶಾಧಿಕಾರಿ ಅಬ್ದುಲ್ ಮಜೀದ್ ಹಾಗೂ ಸಧಸ್ಯರು ಉಪಸ್ಥಿತರಿದ್ದರು.



