ರಾಷ್ಟ್ರೀಯ ಹೆದ್ದಾರಿ 66 ಕೋಟದಲ್ಲಿ ಮತ್ತೆ ರಸ್ತೆ ಅಪಘಾತ ಸಂಭವಿಸಿದೆ.

ಕೋಟ ಶ್ರೀಅಮೃತೇಶ್ವರಿ ದೇವಳಕ್ಕೆ ಹೋಗುವ ಜಂಕ್ಷನ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಯ ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಬರುತ್ತಿದ್ದ ಕಾರಿಗೆ ಕುಂದಾಪುರದ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರ ಅಚಾನಕ್ ಕಾರು ನೋಡಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಸದ್ಯ ಸ್ಕೂಟರ್ ಸವಾರ ಅಲ್ಪ ಸ್ವಲ್ಪ ಗಾಯದೊಂದಿಗೆ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾನೆ. ಇನ್ನು ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ



