ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆ;

ದಕ್ಷಿಣ ಕನ್ನಡ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆಯು ಕೆ.ಜೆ.ಯು. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ವುಡ್ ಲ್ಯಾಂಡ್ ಹೋಟೆಲ್ ಸಭಾಭವನದಲ್ಲಿ ಜು.25ರಂದು ಜರುಗಿತು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು  ಕೆ‌.ಜೆ.ಯು. ಘಟಕದ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಮುಂದಿನ ಅವಧಿಗೆ  ನೂತನ ಜಿಲ್ಲಾ ಸಮಿತಿಯನ್ನು ನೇಮಕ ಮಾಡಲಾಯಿತು. ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಬಂಟ್ವಾಳ್, ಗೌರವ ಸಲಹೆಗಾರರಾಗಿ ರಿಚರ್ಡ್ ಲಸ್ರಾದೋ,  ನೂತನ ಅಧ್ಯಕ್ಷರಾಗಿ  ತಾರನಾಥ ಗಟ್ಟಿ ಕಾಪಿಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಕೆನ್ಯೂಟ್ ಪಿಂಟೋ, ಕೋಶಾಧಿಕಾರಿಯಾಗಿ ಗಿರಿಧರ ಶೆಟ್ಟಿ , ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ವಿಟ್ಲ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಮಂದಾರ ರಾಜೇಶ್ ಭಟ್, ಲಕ್ಷ್ಮಣ ಕುಂದರ್, ಶರೀಫ್ ಜಟ್ಟಿಪಳ್ಳ, ಜ್ಯೋತಿ ಪ್ರಕಾಶ್ ಪುಣಚ ಆಯ್ಕೆಯಾದರು. 

ಕಾರ್ಯದರ್ಶಿಗಳಾಗಿ ಶ್ರೀಮತಿ ವಾಯ್ಲೆಟ್ ಪಿರೇರಾ, ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಶ್ರೀಮತಿ ಹೇಮಾ ಜಯರಾಮ ರೈ, ಗಣೇಶ್ ಕುಕ್ಕುದಡಿ ಆಯ್ಕೆಯಾದರು. ಸದಸ್ಯತ್ವ ಅಭಿಯಾನದ ಸಂಚಾಲಕರಾಗಿ ಈಶ್ವರ ವಾರಣಾಶಿಯವರನ್ನು ಆಯ್ಕೆ ಮಾಡಲಾಯಿತು. 

 ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಈಶ್ವರ ವಾರಣಾಶಿ, ಗೋಪಾಲ ಅಂಚನ್, ಶಿವಪ್ರಸಾದ್ ಆಲೆಟ್ಟಿ, ರಾಮದಾಸ್ ವಿಟ್ಲ, ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಶ್ರೀಧರ ಕಜೆಗದ್ದೆ, ರಮೇಶ್ ಪೆರ್ಲ,  ರಮೇಶ್ ನೀರಬಿದಿರೆ, ವಿನಯ್ ಜಾಲ್ಸೂರು, ಕೆ.ಟಿ. ಬಾಗೀಶ್ ಕೊಯಿಕುಳಿ, ವಿನಯ್ ಕಲ್ಮಡ್ಕ, ಕುಶಾಂತ್ ಕೊರತ್ಯಡ್ಕ, ಧನರಾಜ್, ಶ್ರೀಮತಿ ರಮ್ಯಾ ಸತೀಶ್ ಕಳಂಜ, ಶ್ರೀಮತಿ ರೇಖಾ ಸುಭಾಷ್, ಫ್ಲಾಯ್ಡ್ ಜೀವನ್ ಫರ್ನಾಂಡೀಸ್ ಆಯ್ಕೆಯಾದರು. ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿಯವರನ್ನು ಸದಸ್ಯತ್ವ ಅಭಿಯಾನದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಕೆಜೆಯು ಸದಸ್ಯತ್ವದ ಬಗ್ಗೆ ಚರ್ಚೆ ನಡೆಯಿತು. 

ವೇದಿಕೆಯಲ್ಲಿ ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ವಿಟ್ಲ, ಜ್ಯೋತಿಪ್ರಕಾಶ್ ಪುಣಚ, ರಿಚರ್ಡ್ ಲಸ್ರಾದೋ, ತಾರನಾಥ ಗಟ್ಟಿ ಕಾಪಿಕಾಡು, ಕೆನ್ಯೂನ್ ಪಿಂಟೋ ಉಪಸ್ಥಿತರಿದ್ದರು. 

ಕೆ.ಜೆ.ಯು. ದ.ಕ. ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮಂದಾರ ರಾಜೇಶ್ ಭಟ್

 ನಮ್ಮ ಅಭಿಮತ ಸಂಸ್ಥೆಯಲ್ಲಿ ವರದಿಗಾರರಾಗಿ, ನಿರೂಪಕರಾಗಿ ಈ ಮೊದಲು ಸೇವೆ ಸಲ್ಲಿಸಿದ್ದ ಮಂದಾರ ರಾಜೇಶ್ ಭಟ್ಟರು ದಕ್ಷಿಣ ಕನ್ನಡ ಜಿಲ್ಲಾ ಜರ್ನಲಿಸ್ಟ್  ಯೂನಿಯನ್ ಇದರ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿಮತ ವಾಹಿನಿಯ ಮುಖ್ಯಸ್ಥರಾದ ಮಮತಾ ಶೆಟ್ಟಿ ಇವರು ಅಭಿನಂದಿಸಿದ್ದಾರೆ, ನಮ್ಮ ಅಭಿಮತ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ್ದ ಭಟ್ಟರು ಜಿಲ್ಲಾ  ಜರ್ನಲಿಸ್ಟ್ ಯೂನಿಯನ್ ಇದರ ಉಪಾಧ್ಯಕ್ಷರಾಗಿ, ಪ್ರತಿನಿಧಿಯಾಗಿ  ಇರುವುದು ನಮ್ಮ ಹೆಮ್ಮೆಯ ವಿಚಾರ, ನೇರ ನಡೆನುಡಿಯ ಮಂದಾರ ರಾಜೇಶ್ ಭಟ್ಟರು ಉತ್ತಮ ಬರಹಗಾರರಾಗಿದ್ದು, ಅತ್ಯುತ್ತಮ ವರದಿಗಾರರಾಗಿದ್ದು, ಮಾಧ್ಯಮ ನಿರೂಪಕರಾಗಿಯೂ ಸೇವೆ ಸಲ್ಲಿಸಿದವರಾಗಿದ್ದು, ಪರಿಸರ ಸಂರಕ್ಷಕರಾದ ಇವರಿಗೆ ಇತ್ತೀಚೆಗೆ ಗೌರವ ಡಾಕ್ಟರೇಟ್ ಲಭಿಸಿದ್ದು ಹೆಮ್ಮೆಯ ವಿಚಾರ, ಮಂದಾರ ರಾಜೇಶ್ ಭಟ್ಟರು ಇನ್ನಷ್ಟು ಸಾಧನೆ  ಮಾಡಲಿ, ಅವರಿಗೆ ಸದಾ ನಮ್ಮ ಬೆಂಬಲವಿದೆ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!