ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯ ಬಸ್ ನಿಲ್ದಾಣದಲ್ಲಿ ನೀರು ನಿಂತಿದ್ದು ಬಸ್‌ನಿಂದ ಇಳಿಯುವ ಪ್ರಯಾಣಿಕರಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ.

ಇದರ ಜೊತೆ ರೈಲ್ವೆ ಮೇಲ್ಸೆತುವೆಯ ಮೇಲೆ ಕೂಡ ಗುಂಡಿಗಳು ಬಿದ್ದಿದ್ದು ವಾಹನಗಳು ಗುಂಡಿಗೆ ಬಿದ್ದು ಮತ್ತೆ ಎದ್ದುಕೊಂಡು ಹೋಗುವ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪಾದಾಚಾರಿಗಳಿಗಂತೂ ತೋಡಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.

ಅದಲ್ಲದೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಸಿರೋಡು ಬಸ್ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಗುಂಡಿಯೊಂದು ಬಿದ್ದು ತಿಂಗಳು ಎರಡು ಕಳೆದರೂ ಗುಂಡಿ ಮುಚ್ಚುವ ಕಾರ್ಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಸಮಸ್ಯೆ ಬಗೆಹರಿಸುವ ಜವಬ್ದಾರಿ ಹೊತ್ತಿರುವ ಜನಪ್ರತಿನಿಧಿಗಳೆ ಒಮ್ಮೆ ನಮ್ಮ ಬಿಸಿರೋಡಿಗೆ ಬನ್ನಿ…ಇಲ್ಲಿನ ಚೆಂದವನ್ನು ಒಮ್ಮೆ ನೋಡಿ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.



