ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿನ ಕೊಟ್ಯಾಡಿಯಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ನಿಯಮಬಾಹಿರವಾಗಿ ನಿರ್ಮಿಸಲಾದ ಪೆಟ್ರೋಲ್‌ಪಂಪ್ ಪರವಾನಿಗೆ ಇಲ್ಲದೆ ನಡೆಯುತ್ತಿದ್ದು, ಇದರಲ್ಲಿ ಸೋರಿಕೆ ಇದೆ ಎಂಬ ಮಾಹಿತಿ ಇದೆ.

ರಸ್ತೆಯ ಬದಿಯಲ್ಲಿ ಇಂಟರ್‌ಲಾಕ್ ಅಳವಡಿಕೆ ಮಾಡಿದ ಪರಿಣಾಮ ಚರಂಡಿ ಪೂರ್ಣವಾಗಿ ಮುಚ್ಚಲ್ಪಟ್ಟಿದೆ. ತಕ್ಷಣ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸೂಫಿ ಇಂತಿಯಾಜ್, ಉಮ್ಮರ್ ಫಾರೂಕ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ನಿವೃತ್ತರಾಗಿರುವ ಇಬ್ರಾಹಿಂ ಅವರ ಸಹೋದರನ ಮಗಳು ನಿಜಿಮಾ ಆಲಿ ಮಾಣಿಪ್ಪಾಡಿ ಅವರ ಹೆಸರಲ್ಲಿರುವ ಈ ಪೆಟ್ರೋಲ್ ಪಂಪ್‌ಗೆ ಗ್ರಾಪಂನಿAದ ಪರವಾನಿಗೆ ಇಲ್ಲ. ಹಾಗಿದ್ದರೂ ಅನಧಿಕೃತವಾಗಿ ಇದನ್ನು ಪೆಂಟ್ರೋಲ್ ಪಂಪ್‌ನ್ನು ನಡೆಸಲಾಗುತ್ತಿದೆ.

ರಾಜ್ಯ ಹೆದ್ದಾರಿಯಿಂದ ಕನಿಷ್ಟ ೪೦ ಮೀಟರ್ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂಬುವುದು ಕಡ್ಡಾಯವಾದ ನಿಯಮ. ಆದರೆ ಈ ಪೆಟ್ರೋಲ್ ಪಂಪು ರಸ್ತೆಯಿಂದ ಕೇವಲ ೨೦ ಮೀಟರ್ ದೂರದಲ್ಲಿ ನಿರ್ಮಿಸಲಾಗಿದೆ. ಅನಧಿಕೃತವಾದ ಮಾನದಂಡವನ್ನೇ ಪಾಲಿಸದೆ ನಿರ್ಮಿಸಲಾಗಿರುವ ಈ ಪೆಟ್ರೋಲ್ ಪಂಪ್ ಬಗ್ಗೆ ಯಾವುದೇ ಇಲಾಖೆಯೂ ತಲೆಕೆಡಿಸಿಕೊಂಡಿಲ್ಲ. ಬಡವರ್ಗದ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಗೂಡಂಗಡಿ ಹಾಕಿದರೆ ತಕ್ಷಣ ತೆಗೆದು ಬಿಸಾಡುವ ಅಧಿಕಾರಿಗಳು ಈ ಕಟ್ಟಡ ಅನಧಿಕೃತವಾಗಿದ್ದರೂ ಮೌನವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅಬ್ದುಲ್ ಹಮೀದ್, ಅಬ್ದುಲ್ ಜವಾದ್, ಶಮೀಮ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



