ಮದ್ಯಪಾನ ಮಾಡಿದ ಮತ್ತಿನಲ್ಲಿ ತಂದೆಯನ್ನ ಚಾ*ಕುವಿನಿಂದ ಇ*ರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ್ ಮಗನಿಂದಲೇ ಕೊಲೆಯಾದ ದುರ್ದೈವಿ. ರಂಜನ್ ಎಂಬಾತ ಕೊ*ಲೆಗೈದ ಆರೋಪಿಯಾಗಿದ್ದಾನೆ. ಪೋಷಕರ ನಡುವೆ ನಡೆದ ಗಲಾಟೆ ತಾರಕಕ್ಕೇರಿ ಈ ಕೃತ್ಯ ಎಸಗಿದ ಆರೋಪಿ ಬಳಿಕ ತಂದೆಯ ಅಂತ್ಯಸಂಸ್ಕಾರಕ್ಕೆ ಕೂಡಾ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿ ರಂಜನ್ ಸಂಜೆ ಆಲ್ದೂರಿಗೆ ಹೋಗಿ ಸಂತೆ ಮುಗಿಸಿಕೊಂಡು, ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ತಂದೆ-ತಾಯಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳ ಬಿಡಿಸಲು ಹೋದ ರಂಜನ್, ತಂದೆಗೆ ಹಿಂದಿನಿAದ ಚಾಕು ಇರಿದಿದ್ದಾನೆ. ಕೊನೆಗೆ ಜಗಳ ಬಿಡಿಸಿದ ತಾಯಿ ಚಾಕುವಿನಿಂದ ಆದ ಗಾಯಕ್ಕೆ ಅರಿಶಿನ ಪುಡಿ ಹಚ್ಚಿ ಮಲಗಿಸಿದ್ದಾರೆ. ರಕ್ತ*ಸ್ರಾವ ಹೆಚ್ಚಾಗಿ ಮಂಜುನಾಥ್ ಸಾವನ್ನಪ್ಪಿದ್ದಾರೆ. ಈ ನಡುವೆ ರಂಜನ್ ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟಿದ್ದಾನೆ. ತಂದೆ-ತಾಯಿ ಜಗಳದಲ್ಲಿ ನಾನು ಬಿಡಿಸುವ ವೇಳೆ ತಂದೆಗೆ ಮಚ್ಚು ತಾಗಿ ಗಾಯವಾಗಿ ತೀರಿಕೊಂಡ್ರು ಎಂದು ಕೆಲವರ ಬಳಿ ಹೇಳಿದ್ದನಂತೆ. ಇನ್ನೂ ಕೆಲವರ ಬಳಿ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಿದ್ದ. ಆರೋಪಿಯ ಕಥೆ ಕೇಳಿದ್ದವರು ನಿಜವೆಂದು ಮಂಜುನಾಥ್ ಶ*ವ ಸಂಸ್ಕಾರಕ್ಕೆ ತಯಾರಿ ಮಾಡಿಕೊಂಡಿದ್ದರು. ಪ್ರಕರಣದ ಮಾಹಿತಿ ಪಡೆದ ಆಲ್ದೂರು ಪೊಲೀಸರು, ಅನುಮಾನದ ಮೇಲೆ, ರಂಜನ್‌ನನ್ನು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



