ಮೊದಲಿನಿಂದ ಆಚರಣೆ ಮಾಡಿಕೊಂಡು ಬಂದಂತೆ ಪಾರಂಪರಿಕ ಆಚರಣೆಗೆ ಯಾವುದೇ ಆಕ್ಷೇಪ ಇರುವುದಿಲ್ಲ ಎಂದು ದ.ಕ. ಜಿಲ್ಲಾ ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದ್ದಾರೆ.

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ರು. ಜಿಲ್ಲೆಯ ಜನತೆ ಮುಕ್ತ ಮನಸ್ಥಿತಿಯವರು ಹಾಗೂ ಸೌಹಾರ್ದತೆಯನ್ನು ಕಾಪಾಡುವವರು ಎಂಬುದು ಇಲ್ಲಿನವರ ಮಾತಿನಲ್ಲಿ ಕಾಣುತ್ತಿದೆ. ಕಳೆದ ಮೂರು ವರ್ಷಗಳಿಂದ ಈದ್ ಹಾಗೂ ಚೌತಿ ಕೆಲವು ದಿನಗಳ ಅಂತರದಲ್ಲೇ ಬರುತ್ತಿರುವುದು ದೇವರ ಶುಭ ಸಂಕೇತ ಎಂದು ಭಾವಿಸಬೇಕು. ಕೆಲವು ನಿಬಂಧನೆ ಯಾಕೆ ಎಂದರ ಸಮಾಜದ ಎಲ್ಲರೂ ಸೌಹಾರ್ದವಾಗಿ ಆಚರಣೆ ಆಗಬೇಕು. ಗೋಡೆ ಹಾಕಲು ನಮಗೂ ಇಷ್ಟ ಇಲ್ಲ. ಕೆಲವು ಜನ ಕಿಡಿಗೇಡಿಗಳಿಂದ ಎಲ್ಲರಿಗೂ ಸಮಸ್ಯೆ ಆಗುತ್ತದೆ. ನೀವು ಮಫ್ತಿಯಲ್ಲಿ ಸಂಭ್ರಮಿಸಿದರೆ ನಾವು ಸಮವಸ್ತçದಲ್ಲಿ ಹಬ್ಬಗಳ ಸಂಭ್ರಮ ಪಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಈ ಸಂಧರ್ಭದಲ್ಲಿ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಸುಳ್ಯದ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



