ಸಂಘರ್ಷ ಆಗುತ್ತದೆ ಎಂಬ ಕಾರಣವನ್ನಿಟ್ಟುಕೊಂಡು, ಗಣೇಶೋತ್ಸವ, ಜನ್ಮಾಷ್ಟಮಿಯಂಥಹ ಹಬ್ಬಗಳಿಗೆ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. ಆದರೆ ಇಷ್ಟರವರೆಗೆ ಜನ್ಮಾಷ್ಟಮಿ, ಗಣೇಶೋತ್ಸವ, ದಸರಾ ಮೆರವಣಿಗೆಗಳಲ್ಲಿ ಗಲಭೆ ಆಗಿದೆಯಾ? ಡಿಜೆಯಿಂದ ಗಲಾಟೆಯಾಗಿದೆ, ಶಬ್ದ ಮಾಲಿನ್ಯ ಆಗಿದ್ದು ಇದಕ್ಕೆ ನಮ್ಮ ವಿರೋಧವೂ ಇದೆ. ಆದರೆ ದೊಡ್ಡ ಬಾಕ್ಸ್ ಇಟ್ರೆ ಹೇಗೆ ಗಲಾಟೆ ಆಗುತ್ತೆ? ಕಡಿಮೆ ಸೌಂಡ್ ಮಾಡಿ ಏನು ಪ್ರಯೋಜನ? ಸಾವಿರಾರು ಮಂದಿ ಸೇರುವ ಸಭೆಯಲ್ಲಿ ಹಿಂದಿನವರಿಗೆ ಕೇಳುತ್ತಾ? ಕುದ್ರೋಳಿ ಉತ್ಸವವನ್ನು 10.30ಕ್ಕೆ ಮುಗಿಸಲು ಸಾಧ್ಯವಿದೆಯಾ? ಹೀಗೆಂದು ವಿಶ್ವಹಿಂದೂ ಪರಿಷತ್‌ನ ಕರ್ನಾಟಕದ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಶ್ನಿಸಿದ್ದಾರೆ.
ಮಂಗಳೂರಿನ ವಿಎಚ್‌ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರಣ್, ಗಣೇಶೋತ್ಸವ, ದಸರಾ ಹಬ್ಬಗಳನ್ನು ಮುಂದಿಟ್ಟುಕೊಂಡು ಪೊಲೀಸ್ ಇಲಾಖೆ ಆದೇಶ ಹೊರಡಿಸಿ ಧ್ವನಿ ವರ್ಧಕಕ್ಕೆ ನಿಯಮ ವಿಧಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು 10.30ಗೆ ಮುಗಿಸಬೇಕು, ಡಿಜೆ ಬಳಸಬಾರದು, ಧ್ವನಿವರ್ಧಕ ಶಬ್ದ ಇಷ್ಟೇ ಇರಬೇಕೆಂಬ ಆದೇಶ ಕೊಟ್ಟಿದ್ದಾರೆ. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಕಮೀಷನರ್, ಜಿಲ್ಲಾ ಎಸ್ಪಿ, ಡಿಸಿ ತಿಳಿಸಿದ್ದಾರೆ. ಆದರೆ ಡಿಜೆ ಬಳಸಬಾರದು ಎಂಬ ಆದೇಶವನ್ನು ವಿಎಚ್‌ಪಿ ಸ್ವಾಗತಿಸಿದೆ. ಕಳೆದ ಹತ್ತಾರು ವರ್ಷಗಳಿಂದ ಡಿಜೆಗೆ ಅವಕಾಶ ಕೊಡಬಾರದು ಎಂದಿದ್ದೆವು.
ಡ್ರಗ್ಸ್ ಮುಕ್ತ ಕರಾವಳಿ ಮಾಡುವ ಕ್ರಮಕ್ಕೆ ನಮ್ಮ ಸ್ವಾಗತವಿದ್ದು, ನಾವೂ ಸಹಕಾರ ಕೊಡುತ್ತೇವೆ ಎಂದರು. ಕಮಿಷನರ್ ಮಂಗಳೂರಿಗೆ ಬಂದ ಮೇಲೆ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹ ಕಡಿಮೆಯಾಗಿದೆ. ಆದರೆ ಶಾಂತಿ ಸುವ್ಯವಸ್ಥೆ ನೆಪದಲ್ಲಿ ನಿರ್ಬಂಧ ಹೇರಲಾಗದು ಎಂದರು. ತುಳುನಾಡು ಎಂದರೆ ಬಹಳ ವಿಶೇಷತೆಯನ್ನು ಒಳಗೊಂಡಿದೆ, ಕೋಲ, ನಾಗಾರಾಧನೆ, ಯಕ್ಷಗಾನ… ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ತುಳುನಾಡು ಸಂಸ್ಕೃತಿ ಪ್ರಸಿದ್ಧವಾಗಿದೆ. ಇದಕ್ಕೆ ಈ ಕಾರ್ಯಕ್ರಮಕ್ಕೆ ವಿದೇಶಗಳಿಂದಲೂ ಬರುತ್ತಾರೆ. ಗಣೇಶೋತ್ಸವ 7, ದಸರ 10 ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮದಿಂದ ಅಲಂಕಾರ, ಶಾಮಿಯಾನ, ಧ್ವನಿವರ್ಧಕ ವ್ಯಾಪಾರಿಗಳು ಜೀವನ ನಡೆಸುತ್ತಾರೆ. ಆದರೆ ಹೊಸ ನಿಯಮಗಳಿಂದ ಅವರ ಜೀವನಕ್ಕೆ ಪೆಟ್ಟು ಬಿದ್ದಿದೆ. ನಿಯಮಗಳನ್ನು ಸಡಿಲಿಸುವಂತೆ ಮನವರಿಕೆ ಮಾಡಲು ಡಿಸಿಗೆ ಮನವಿ ಸಲ್ಲಿಸಿದ್ದೇವೆ.
ಆದರೆ ಅಲ್ಲಿ ಡಿಸಿ ಇರದ ಕಾರಣ ಎಡಿಸಿಗೆ ಮನವಿ ಕೊಟ್ಟಿದ್ದೇವೆ ಎಂದರು. ಪ್ರತಿವರ್ಷದಂತೆ ಈ ಬಾರಿಯೂ ದಾರ್ಮಿಕ ಉತ್ಸವ, ಮೆರವಣಿಗೆಗಳನ್ನು ನಡೆಸಲು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ 2000ದ ನಿಯಮ 5(3)ರಲ್ಲಿ ಪ್ರದಕ್ತವಾಗಿರುವ ಅಧಿಕಾರ ಉಪಯೋಗಿಸಿ ಜಿಲ್ಲೆಯಲ್ಲಿ ಆಗಸ್ಟ್ 27,28,29,30,31 ಹಾಗೂ ಸೆ.2ರಂದು ಗಣೇಶೋತ್ಸವ ಮೆರವಣಿಗೆ, ಅ.1,2,3ರಂದು ದಸರಾ ಆಚರಿಸಲು ರಿಯಾಯಿತಿ ಕೊಟ್ಟು ಅನುಕೂಲ ಮಾಡಿಕೊಡುವಂತೆ ಅವರು ವಿನಂತಿಸಿದರು. ನಮಗೆ ಗಣೇಶೋತ್ಸವ ಆಯೋಜಕರು, ಧ್ವನಿ ವರ್ಧಕ ಸಂಘದವರೂ ನಿಯಮಗಳನ್ನು ಸಡಿಲಿಸುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ತುಳುನಾಡಿನ ಸಂಸ್ಕೃತಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜಿಲ್ಲಾಧ್ಯಕ್ಷ ಎಚ್‌ಕೆ ಪರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ ಉಪಸ್ಥಿತರಿದ್ದರು.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…