ಪಂಜಾಬ್‌ನ ಹೋಶಿಯಾರ್‌ಪುರ-ಜಲಂಧರ್ ರಸ್ತೆಯ ಮಂಡಿಯಾಲ ಅಡ್ಡಾದಲ್ಲಿ ಎಲ್‌ಪಿಜಿ ಟ್ಯಾಂಕರ್ ಸ್ಪೋಟಗೊಂಡು 7 ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಟ್ಯಾಂಕರ್ ಚಾಲಕ ಸುಖಜೀತ್ ಸಿಂಗ್, ಬಲ್ವಂತ್ ರಾಯ್, ಧರ್ಮೇಂದರ್ ವರ್ಮಾ, ಮಂಜಿತ್ ಸಿಂಗ್, ವಿಜಯ್, ಜಸ್ವಿಂದರ್ ಕೌರ್ ಮತ್ತು ಆರಾಧನಾ ವರ್ಮ ಎಂದು ಗುರುತಿಸಲಾಗಿದೆ. ಪಿಕಪ್ ವಾಹನಕ್ಕೆ ಎಲ್‌ಪಿಜಿ ಟ್ಯಾಂಕರ್ ಢಿಕ್ಕಿಯಾಗಿದ್ದು, ಆ ಬಳಿಕ ಸ್ಫೋಟ ಸಂಭವಿಸಿ ಈ ಘಟನೆ ನಡೆದಿದೆ. ಟ್ಯಾಂಕರ್ ರಾಮ್ ನಗರ್ ದೇಹಾ ಲಿಂಕ್ ರಸ್ತೆಯ ಕಡೆಗೆ ತಿರುಗುತ್ತಿದ್ದಾಗ ಪಿಕಪ್ ಗೆ ಢಿಕ್ಕಿಯಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಸ್ಪೋಟ ಸಂಭವಿಸಿದೆ



