ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ಸರ್ಜರಿ ಸೌಲಭ್ಯವನ್ನು ಆರಂಭಿಸಲಾಗಿದೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಯು ಎಸ್ ಎಸ್ ಐ ಮಂತ್ರ 3.0 ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಅನ್ನು ಅಳವಡಿಸಿಕೊಂಡು ರೊಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ದಾಖಲಿಸಿದೆ.
ಎಸ್ ಎಸ್ ಐ ಮಂತ್ರ 3.0 ಭಾರತದಲ್ಲೇ ನಿರ್ಮಿಸಲ್ಪಟ್ಟ, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಉಪಕರಣ. ಇದರ ನಿರ್ಮಾಣ ಒಂದು ಹೆಮ್ಮೆಯ ಸಾಧನೆ ಯಾಗಿದೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ವಿಜಯ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಡಾ. ವಿನ್ನಿ ಮತ್ತು ಮಂತ್ರಾ 3.0 ಎಂಬ ಎರಡು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳನ್ನೂ ಹೊಂದಿರುವ ದೇಶದ ಏಕೈಕ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿದೆ.
ಸರ್ಕಾರಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಬಡ ರೋಗಿಗಳಿಗೆ ಉಚಿತವಾಗಿ ರೋಬೋಟಿಕ್ ಶಸ್ತ್ರಚಿಕಿತ್ಸೆ ನೀಡುವ ದೇಶದ ಏಕೈಕ ಖಾಸಗಿ ಆಸ್ಪತ್ರೆಯಾಗಿ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಗುರುತಿಸಿಕೊಂಡಿದೆ ಎಂದವರು ವಿವರಿಸಿದ್ದಾರೆ. ಮೂತ್ರ ರೋಗ ಶಾಸ್ತ್ರ ಅರ್ಬುದ ಶಸ್ತ್ರಚಿಕಿತ್ಸಾ, ಸ್ತ್ರೀರೋಗ ಶಾಸ್ತ್ರ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಮಂತ್ರ 3.0 ಅನ್ನು ಬಳಸಿಕೊಂಡು ಸುಮಾರು 100 ಕಾರ್ಯವಿಧಾನಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಮಂತ್ರಾ 2.0 ರ ಸುಧಾರಿತ ಆವೃತ್ತಿಯಾದ ಮಂತ್ರಾ 3.0, ಮುಂದಿನ ತಲೆಮಾರಿನ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಪ್ರತಿಬಿಂಬಿಸುತ್ತದೆ.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳ ಭಾಗದಲ್ಲಿ 2016 ರಲ್ಲಿ ಡಾ ವಿನ್ಸಿ ಸರ್ಜಿಕಲ್ ಸಿಸ್ಟಮ್ ನೊಂದಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದಂತಹ ಸಂಸ್ಥೆಯಾಗಿದೆ. ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಭಾರತೀಯರಾಗಿ, ನಮ್ಮ ದೇಶದಲ್ಲೇ ರೂಪುಗೊಂಡ ಈ ವಿಶ್ವಮಟ್ಟದ ನಾವೀನ್ಯತೆಯೊಂದಿಗೆ ಜಗತ್ತಿನ ಶ್ರೇಷ್ಠ ಸಾಧನೆಗಳಿಗೆ ಸಮಾನವಾಗಿ ನಿಲ್ಲುತ್ತದೆ.
ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದೂ ಡಾ. ವಿಜಯ ಕುಮಾರ್ ಹೇಳಿದ್ದಾರೆ. ರೋಬೋಟಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಗಾಯದ ಪ್ರಮಾಣ ಬಹಳ ಕಡಿಮೆ ಮತ್ತು ತ್ವರಿತ ಚೇತರಿಕೆ ಹಾಗು ರಕ್ತದ ನಷ್ಟವೂ ಕಡಿಮೆ ಎಂದವರು ರೊಬೋಟಿಕ್ ಶಸ್ತ್ರಚಿಕಿತ್ಸೆಯ ಪ್ರಯೋಜನಗಳನ್ನು ವಿವರಿಸಿದ್ದು, ಯೆನಪೋಯ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, ಸಹ ಕುಲಪತಿ ಫರ್ಹಾದ್ ಯೇನೆಪೋಯ ಅವರ ದೂರದೃಷ್ಟಿಯುತ ನಾಯಕತ್ವದ ಮಾರ್ಗದರ್ಶನದಲ್ಲಿ, ಈ ಆಸ್ಪತ್ರೆ ಸಮಾಜದ ಎಲ್ಲಾ ವರ್ಗಗಳಿಗೆ ವಿಶೇಷವಾಗಿ ಅತ್ಯಂತ ಆರ್ಥಿಕವಾಗಿ ಹಿಂದುಳಿದವರಿಗೆ – ವಿಶ್ವಮಟ್ಟದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡಲು ನಿರಂತರವಾಗಿ ಬದ್ಧವಾಗಿದೆ ಎಂದವರು ತಿಳಿಸಿದ್ಧಾರೆ.
ಇನ್ನು ಈ ಸಂದರ್ಭದಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ.ಮೂಸಬ್ಬ, ಯುರೋ ಲಾಜಿ ವಿಭಾಗದ ಮುಖ್ಯಸ್ಥ ಡಾ.ಮುಜೀಬ್ ರಹ್ಮಾನ್, ಡಾ.ಜಲಾಲುದ್ದೀನ್ ಅಕ್ಬರ್, ಡಾ.ಅಲ್ತಾಫ್, ಡಾ.ಅಂಜುಮ್ ಮತ್ತು ಎಸ್‌ಎಸ್ ಐ ರೋಬೋಟಿಕ್ ಸಂಸ್ಥೆಯ ಸಿಇಒ ವಿಶ್ವ ಜ್ಯೋತಿ ಶ್ರೀವಾತ್ಸವ್ ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…