ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮನಕ್ಷತ್ರದ ಪ್ರಯುಕ್ತ ಶ್ರೀಪಾದರು ಸಂಕಲ್ಪಿಸಿದ0ತೆ ತಾವು ಆರಾಧನೆ ಮಾಡುವ ಶ್ರೀ ಕೃಷ್ಣನಿಗೆ ವಿಶ್ವರೂಪ ಹಿನ್ನೆಲೆಯ ಸುವರ್ಣ ಪ್ರಭಾವಳಿಯನ್ನು ಇಂದು ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದ್ದಾರೆ.

ಚಿನ್ನದ ಪ್ರಭಾವಳಿಯನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಬರಮಾಡಿಸಿಕೊಂಡು ಶ್ರೀಮಠದ ಒಳಗೆ ತರಲಾಯಿತು. ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಸುಶೀಂಧ್ರತೀರ್ಥ ಶ್ರೀಪಾದರು, ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಹಾಗೂ ಮಠದ ಶಿಷ್ಯರು ಉಪಸ್ಥಿತರಿದ್ದರು.



