ಕಾಸರಗೋಡು: 24ನೇ ಕಾರ್ಗಿಲ್ ವಿಜಯ್ ದಿನವನ್ನು ಭಾರತವು ವೀರೋಚಿತವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾಡಳಿತ ವತಿಯಿಂದಲೂ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ನಡೆಯಿತು.


ಜಿಲ್ಲಾಧಿಕಾರಿ ಕೆ.ಇಂಪಶೇಖರ್ ಕಾರ್ಗಿಲ್ ಹುತಾತ್ಮರಿಗೆ ಪುಷ್ಪಾರ್ಚನೆ ನಡೆಸಿದರು. 1999 ಮೇ ನಿಂದ ಜುಲೈ ವರೆಗೆ ಸುದೀರ್ಘವಾದ ಕಾರ್ಗಿಲ್ ಯುದ್ಧದಲ್ಲಿ ವೀರಮೃತ್ಯು ಪಡೆದ 527 ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ದೇಶಾದಾದ್ಯಂತ ಇಂದು ಕಾರ್ಗಿಲ್ ವಿಜಯ್ ದಿನವನ್ನು ಆಚರಿಸುತ್ತಿದೆ.



