ಹೃದಯ ಮತ್ತು ನರನಾಳಗಳ ಆರೈಕೆಗಾಗಿ ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ಲ್ಯಾಬ್ ಕಾರ್ಯಾರಂಭ ಮಾಡಿದೆ.

ಹೈಲ್ಯಾಂಡ್‌ನ ಫಳ್ನೀರ್ ರಸ್ತೆಯಲ್ಲಿರುವ ಯೂನಿಟಿ ಆಸ್ಪತ್ರೆಯು, ಹೃದಯ, ನರ ಮತ್ತು ವಿಕಿರಣಶಾಸ್ತ್ರ ಕಾರ್ಯವಿಧಾನಗಳಿಗೆ ಉನ್ನತ ಗುಣಮಟ್ಟವನ್ನು ಹೊಂದಿರುವ ಅತ್ಯಂತ ಸುಧಾರಿತ ಇಂಟರ್ವೆನ್ಷನಲ್ ಸೂಟ್ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ – ಆವೃತ್ತಿ 3.0 ಸೌಲಭ್ಯವನ್ನು ಅಳವಡಿಸಿಕೊಂಡಿದೆ. ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಳವಡಿಕೆಯಾಗಿರುವ ಈ ಅತ್ಯಾಧುನಿಕ, ಸೀಲಿಂಗ್-ಮೌಂಟೆಡ್ ಕ್ಯಾಥ್ಲ್ಯಾಬ್ ಹೃದಯ, ನರನಾಳ ಮತ್ತು ಇಂಟರ್ವೆನ್ಷನಲ್ ರೇಡಿಯಾಲಜಿ ಕಾರ್ಯವಿಧಾನಗಳಿಗೆ ವಿಶ್ವ ದರ್ಜೆಯ ನಿಖರತೆಯನ್ನು ಹೊಂದಿದೆ.

ಕಡಿಮೆ ಅವಧಿ ಮತ್ತು ಸುಧಾರಿತ ಸುರಕ್ಷತೆಯೊಂದಿಗೆ ಉತ್ತಮ ಫಲಿತಾಂಶಗಳನ್ನು ನೀಡಲು ವಿನ್ಯಾಸಗೊಳಿಸಲಾದ ಫಿಲಿಪ್ಸ್ ಅಜುರಿಯನ್ ವ್ಯವಸ್ಥೆಯಲ್ಲಿ ಗಾಯದ ಪ್ರಮಾಣ ಅತ್ಯಂತ ಕನಿಷ್ಠವಾಗಿರುತ್ತದೆ. ಸಂಕೀರ್ಣ ಹೃದಯ ಮತ್ತು ನರನಾಳ ಚಿಕಿತ್ಸೆಯ ಸಂದರ್ಭದಲ್ಲಿ ನಿಖರತೆಯನ್ನು ಹೆಚ್ಚಿಸುತ್ತದೆ. ಸಾಂಪ್ರದಾಯಿಕ ಕ್ಯಾತ್ ಲ್ಯಾಬ್‌ಗಳಿಗೆ ಹೋಲಿಸಿದರೆ ಈ ವಿಧಾನದಲ್ಲಿ ವಿಕಿರಣಕ್ಕೆ ಒಡ್ಡಿಕೊಳ್ಳುವಿಕೆ 30% ವರೆಗೆ ಕಡಿಮೆ. ಇದು ರೋಗಿ ಮತ್ತು ವೈದ್ಯರ ಸುರಕ್ಷತೆಯನ್ನು ಸುಧಾರಿಸುತ್ತದೆ. ನೈಜ-ಸಮಯದ, ನಿಖರವಾದ ದೃಶ್ಯಗಳ ಮೂಲಕ ಮಾರ್ಗದರ್ಶನವನ್ನು ಒದಗಿಸುತ್ತದೆ, ವೇಗವಾಗಿ ಮತ್ತು ಹೆಚ್ಚು ನಿಖರವಾದ ಸ್ಟೆಂಟ್ ನಿಯೋಜನೆಗೆ ಇದು ಅನುವು ಮಾಡಿಕೊಡುತ್ತದೆ, ಒಟ್ಟಾರೆ ಚಿಕಿತ್ಸಾ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಯೂನಿಟಿ ಆಸ್ಪತ್ರೆಯ ಪತ್ರಿಕಾ ಹೇಳಿಕೆ ತಿಳಿಸಿದೆ.



