ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಗುಡ್ಡ ಕುಸಿತದ ಘಟನೆಗಳು ವರದಿಯಾಗಿವೆ.

ನಿರಂತರ ಮಳೆಗೆ ಸುಬ್ರಹ್ಮಣ್ಯ ಬಿಸಿಲೆ ಘಾಟ್ ರಾಜ್ಯ ಹೆದ್ದಾರಿ ಯಲ್ಲಿ ಭೂ ಕುಸಿತ ಸಂಭವಿಸಿದ್ದು, ರಾಜ್ಯ ಹೆದ್ದಾರಿ 85 ರ ಅಡ್ಡಹೊಳೆ ಸಮೀಪ ರಸ್ತೆಗೆ ಭಾರೀ ಪ್ರಮಾಣದ ಮಣ್ಣು ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಸತತ ಐದು ಗಂಟೆಗಳ ಕಾಲ ವಾಹನಗಳು ಮುಂದೆ ಚಲಿಸದಂತಾದವು. ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.



