ಒಮ್ಮೆ ಕರು ಹಾಕಿದ ಆಕಳು ಕರು ಎಂಟೇ ದಿನಕ್ಕೆ ಇನ್ನೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಕಾಪು ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.

ಕೆಲವೊಮ್ಮೆ ವಿಚಿತ್ರ ಶಿಶು ಜನನ, ಎರಡು ತಲೆಯ ಪ್ರಾಣಿಯ ಜನನ ಹೀಗೆ ವಿಸ್ಮಯ ಲೋಕವನ್ನು ಕಂಡಿದ್ದೇವೆ ಓದಿದ್ದೇವೆ. ಸಾಮಾನ್ಯವಾಗಿ ಆಕಳು ಒಂದು ಕರು ಹಾಕಿದ ಬಳಿಕ ಮತ್ತೊಮ್ಮೆ ಕರು ಹಾಕಲು ಮನಷ್ಯನಂತೆಯೇ ಒಂಬತ್ತು ತಿಂಗಳು ಗರ್ಭ ಧರಿಸಿ ಬಳಿಕ ಕರುವಿಗೆ ಜನ್ಮ ನೀಡುವುದು ಪಕ್ರತಿಯ ನಿಯಮ.

ಆದರೆ ಅದಕ್ಕೆ ಸವಾಲೆಂಬಂತೆ ಅದರಲ್ಲೂ ಬಹುಷಾ ಇದೇ ಪ್ರಥಮ ಬಾರಿಗೊ ಎಂಬಂತೆ ಹತ್ರಬೈಲು ಹೊಲಗದ್ದೆ ನಿವಾಸಿ ರವಿ ಶೆಟ್ರ ಮನೆಯಲ್ಲಿ ಇಂತಹ ಅಪರೂಪದ ಘಟನೆ ನಡೆದಿದ್ದು, ವೈದ್ಯಕೀಯ ಲೋಕಕ್ಕೆ ಅಚ್ಚರಿಯನ್ನುಂಟು ಮಾಡಿದ ಈ ವಿರಳಾತಿ ವಿರಳ ಘಟನೆಗೆ ವೈದ್ಯಕೀಯ ಲೋಕವೇ ಬೆರಗಾಗುವಂತೆ ಮಾಡಿದೆ.



