ಮಂಗಳೂರಿನ ಪ್ರತಿಷ್ಠಿತ ವೃತ್ತಗಳಲ್ಲಿ ಒಂದಾದ ಬಂಟ್ಸ್ ಹಾಸ್ಟೆಲ್ ವೃತ್ತದ ಆಸುಪಾಸಿನ ಮಾರ್ಗವು ಗುಂಡಿಗಳಿಂದ ತುಂಬಿದ್ದು ದುರಸ್ತಿ ಮರೀಚಿಕೆಯಾಗಿದೆ.

ದಿನ ನಿತ್ಯವೂ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳು ಗುಂಡಿಗೆ ಬಿದ್ದು ಏಳುತ್ತಿವೆ. ಮಳೆ ಬಂದರೆ ವಾಹನಗಳು ದೌಡಾಯಿಸುವಾಗ ಹೊಂಡದ ನೀರು ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕ ಮಾಡುತ್ತದೆ. ಮಾರ್ಗದ ತಿರುವಿನಲ್ಲಿ ಉಂಟಾದ ಗುಂಡಿಯಂತೂ ಅಪಾಯಕ್ಕೆ ಆಸ್ಪದವನ್ನು ನೀಡುತ್ತಿದೆ. ಚರಂಡಿಗೆ ಹೊದಿಸಲಾದ ಸ್ಲಾಬ್ ನ ಸಿಮೆಂಟ್ ಎದ್ದು ಹೋಗಿದ್ದು ಕಬ್ಬಿಣದ ಕಂಬಿ ಹೊರಗೆ ಬಂದಿದ್ದು, ಅದರ ದುರಸ್ತಿ ಕಾರ್ಯಗಳು ಕೂಡ ನಡೆದಿಲ್ಲ.



