01-08-2023 ರಿಂದ 12-08-2023 ರ ವರೆಗೆ ದಕ್ಷಿಣ ಕೊರಿಯಾ ದ sae Mangeum, Jeollabuk -do ದಲ್ಲಿ ನಡೆಯುವ 25ನೇ ವಿಶ್ವ ಸ್ಕೌಟ್ ಜಾಂಬೂರಿ ಗೆ ತೆರಳುವ ಶ್ರೀ ರಾಮಕೃಷ್ಣ ಪ್ರೌಢಶಾಲಾ ದೈಹಿಕ, ಹಾಗೂ ಸ್ಕೌಟ್ ಶಿಕ್ಷಕಿ ಶ್ರೀಮತಿ ಸುನಿತಾ, ಶ್ರೀಮತಿ ಮೈತ್ರೇಯಿ ಅವರೊಂದಿಗೆ ಶಿಲ್ಪಾ, ಪ್ರಾರ್ಥನಾ ಬಂಗಾರಡ್ಕ, ಚಿಂತನ್ ಸಾಲ್ಯಾನ್ ಬಿ, ಸತ್ಯ ಪ್ರಸಾದ್, ಅಕ್ಷಯ್ ಕೃಷ್ಣ, ಅಕ್ಷತ್ ಕುಮಾರ್, ಮೊಹಮ್ಮದ್ ಅರ್ಫನ್ ಶಹನ್, ಅನಿಕೇತ್, ವೃಷಭ್ ಆರ್ ರೈ, ಆಧ್ಯ ಸುಲೋಚನ,ಇರೋಲ್ ಶಮನ್ ಡಿಸೋಜ,ಸೈಲುಸ್ ಅಶಲೈ ಅಲ್ಮೇಡ, ವೈಷ್ಣವಿ, ಸಮೃದ್ಧಿ ಚೌಟ, ಶಿಲ್ಪ ಬಿ, ಶ್ರೀಕೃಷ್ಣ ನಟ್ಟೋಜ, ಧನುಷ್ ರಾಮ್ ಎಮ್, ಇಷಾ ಸುಲೋಚನಾ, ಆಫ್ಝಲ್ ಇವರಿಗೆ ಕಾರ್ಗಿಲ್ ವಿಜಯ ದಿವಸದ ದಿನವಾದ ಇಂದು ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಮತ್ತು ಪುತ್ತೂರ್ದ ಮುತ್ತು ಲಿಯೋ ಕ್ಲಬ್ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.
ಲಯನ್ಸ್ ಅಧ್ಯಕ್ಷ ಎನ್ ರವೀಂದ್ರ ಪೈ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ನಮ್ಮ ದೇಶದ ಮಕ್ಕಳು ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಸ್ಕೌಟ್ ಜಾಂಬೂರಿಯಲ್ಲಿ ಭಾಗವಹಿಸಿ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳನ್ನು ಬೇರೆ ದೇಶದ ಮಕ್ಕಳೊಂದಿಗೆ ಹಂಚಿಕೊಂಡು ಅವರ ಸಂಸ್ಕೃತಿ ಸಂಸ್ಕಾರಗಳ ಅಧ್ಯಯನವನ್ನು ಮಾಡಿ ಅನುಭವಗಳನ್ನು ಹೆಚ್ಚಿಸಿಕೊಳ್ಳಲು ಒಂದು ಸದಾವಕಾಶ. ಇದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷರು ಲ್ಯಾನ್ಸಿ ಮಸ್ಕರೇನಸ್ ಸುರಕ್ಷಿತವಾಗಿ ಹೋಗಿ ತಮ್ಮ ಅನುಭವಗಳನ್ನು ಹೆಚ್ಚಿಸಿಕೊಂಡು ಬಂದು ನಮ್ಮ ಇತರೇ ಮಕ್ಕಳೊಂದಿಗೆ ಅದನ್ನು ಹಂಚಿಕೊಂಡು ಸ್ಕೌಟ್ ಗೆ ಇನ್ನಷ್ಡು ಮಕ್ಕಳು ಸೇರುವಂತಾಗಲಿ ಎಂದು ಶುಭಹಾರೈಸಿದರು. ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ ಮಾತನಾಡಿ ನಾನು ಜಪಾನ್ ನಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿದ ಒಂದು ಒಳ್ಳೆಯ ಅನುಭವ ನನ್ನ ಜೊತೆ ಇದೆ. ಒಂದು ಒಳ್ಳೆಯ ಅವಕಾಶ ನಿಮಗೂ ಲಭಿಸಿದೆ ಇದನ್ನು ಧನಾತ್ಮಕವಾಗಿ ಬಳಸಿಕೊಂಡು ನಿಮ್ಮ ಜೀವನವನ್ನು ಉಜ್ಬಲಗೊಳಿಸಿ ಎಂದು ಹೇಳಿ ಶುಭಹಾರೈಸಿದರು.ಲಯನ್ಸ್ ಸದಸ್ಯ ಭಾಗ್ಯೇಶ್ ರೈ ಮಾತಿನಾಡಿ ಕಾರ್ಗಿಲ್ ವಿಜಯ ದಿವಸವಾದ ಇಂದು ಸಿವಿಲ್ ಸರ್ವೀಸ್ ಮಾಡುತ್ತಿರುವ ಸ್ಕೌಟ್ ಗಳಿಗೆ ಗೌರವಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತಸ ತಂದಿದೆ. ನೀವು ಜಾಂಬೂರಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಭಾಗವಹಿಸಿ ಬರುವಂತೆ ಭಗವಂತನು ಅನುಗ್ರಹಿಸಲಿ. ನಾನು ಸುಮಾರು 30 ಜನರನ್ನು ನನ್ನ ಸಂಸ್ಥೆ ವಿದ್ಯಾಮಾತಾ ಅಕಾಡಮಿಯ ಮೂಲಕ ಸೈನ್ಯಕ್ಕೆ ಸೇರಿಸುವಲ್ಲಿ ಯಶ್ವಿಯಾಗಿದ್ದೇನೆ. ನೀವೂ ಕೂಡ ಮುಂದಿನ ದಿನಗಳಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು. ಸಂದರ್ಭದಲ್ಲಿ ರವಿಪ್ರಸಾದ್ ಶೆಟ್ಟಿ, ಅಬೂಬಕ್ಕರ್ ಮುಲಾರ್, ತಾಲೂಕು ಸ್ಕೌಟ್ ಅಧ್ಯಕ್ಷ ಶ್ರೀಧರ್ ರೈ , ಕಾರ್ಯದರ್ಶಿ ವಿದ್ಯಾಗೌರಿ, ಉಮಾ ದಿನೇಶ್ ಉಪಸ್ಥಿತರಿದ್ದರು, ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಅಧ್ಯಕ್ಷರು ಲೆರಿಸ್ಸಾ ಪ್ರಿನ್ಸಿ ಮಸ್ಕರೇನಸ್ ವಂದಿಸಿದರು.
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ವಾಹನದಲ್ಲಿದ್ದ 20ಕ್ಕೂ…
ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ, ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಎಮ್ಮೆ ಕೊಪ್ಪಲು…
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಬಂಟ್ವಾಳ ನಂ.1 ಮತ್ತು ನಂ 2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಿ.ಸಿ.ರೋಡ್‌ನಲ್ಲಿರುವ…