ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜಿಸಲು ರಾಜ್ಯದ ಶಾಲೆಗಳಲ್ಲಿ ‘ವಾಟರ್ ಬೆಲ್’ ಕಾರ್ಯಕ್ರಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ.

ಕೇರಳ ಶಾಲೆಗಳಲ್ಲಿ ಈಗಾಗಲೇ ‘ವಾಟರ್ ಬೆಲ್’ ಕಾರ್ಯಕ್ರಮ ಅನುಷ್ಠಾನದಲ್ಲಿದ್ದು, ದಿನಕ್ಕೆ ಎರಡು ಬಾರಿ ಕೇರಳದ ಶಾಲೆಗಳಲ್ಲಿ ವಾಟಲ್ ಬೆಲ್ ಆಗಲಿದೆ. ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30 ರ ಅವಧಿಯಲ್ಲಿ ವಾಟರ್ ಬೆಲ್ ಆಗುತ್ತದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯಬೇಕು. ಕೇರಳದಲ್ಲಿ ಪ್ರಾರಂಭ ಆಗಿರುವ ವಾಟರ್ ಬೆಲ್ ಕಾರ್ಯಕ್ರಮ ಕರ್ನಾಟಕದ ಶಾಲೆಗಳಲ್ಲೂ ಅನುಷ್ಠಾನಕ್ಕೆ ತರಲು ಚಿಂತನೆ ನಡೆದಿದೆ. ಈಗಾಗಲೇ ಶಿಕ್ಷಣ ಇಲಾಖೆ ಹಂತದಲ್ಲಿ ವಾಟರ್ ಬೆಲ್ ಜಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಶೀಘ್ರವೇ ರಾಜ್ಯದ ಶಾಲೆಗಳಲ್ಲೂ ಈ ಕಾರ್ಯಕ್ರಮ ಅನುಷ್ಠಾನ ಆಗುವ ಸಾಧ್ಯತೆಯಿದೆ



