ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಮಾತನಾಡಿ ಹುಣಸೂರು, ಪಿರಿಯಾಪಟ್ಟಣ, ಎಚ್ ಡಿ ಕೋಟೆ, ಸರಗೂರು, ಸಾಲಿಗ್ರಾಮ, ಕೆ ಆರ್ ನಗರ ಈ ಆರು ತಾಲೂಕುಗಳಿಗೆ ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳಿದ್ದು ಈ ಆರು ತಾಲೂಕುಗಳಿಂದ ಸಾವಿರಾರು ಜನ ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಿದ್ದಾರೆ.

ಹಾಗೂ ರಾಷ್ಟ್ರೀಯ ಹೆದ್ದಾರಿಯೂ ನಗರದ ಮಧ್ಯ ಭಾಗದಲ್ಲಿ ಹಾದುಹೋಗಿರುವುದರಿಂದ ಹೈಟೆಕ್ ಶೌಚಾಲಯಗಳ ಅವಶ್ಯಕತೆ ಅಗತ್ಯವಾಗಿ ಬೇಕಾಗಿದೆ. ಆದರೆ ಸರಿಯಾದ ಒಂದು ಹೈಟೆಕ್ ಶೌಚಾಲಯವಿಲ್ಲದೆ ಸಾರ್ವಜನಿಕರು ಬಹಳ ತೊಂದರೆ ಪಡುತ್ತಿದ್ದಾರೆ. ಅದರಲ್ಲೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು, ಮಹಿಳೆಯರು ಬೆಳಗ್ಗಿನಿಂದ ಸಂಜೆವರೆಗೂ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಹುಣಸೂರಿಗೆ ಬಂದು ಹೋಗುತ್ತಿದ್ದಾರೆ. ಆದರೆ ಸರಿಯಾದ ಹೈಟೆಕ್ ಶೌಚಾಲಯವಿಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ಇದೆ. ನಗರದ ಕೆಲವು ಕಡೆ ಶೌಚಾಲಯಗಳು ಇದ್ದರೂ ಸಹ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಅನೈರ್ಮಲ್ಯದಿಂದ ಕೂಡಿದ್ದು ಸಾರ್ವಜನಿಕರು ಈ ಶೌಚಾಲಯವನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ, ನಗರಸಭೆಗೆ ಕೋಟ್ಯಾಂತರ ರೂ.ಗಳ ಕಂದಾಯದ ಹಣ ಹರಿದು ಬರುತ್ತಿದ್ದರು ಸಹ ನಗರದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸದೆ ಇರುವುದು ಹಾಗೂ ಜನಪ್ರತಿನಿಧಿಗಳು ಸಹ ಸಾರ್ವಜನಿಕರ ಸುರಕ್ಷತೆಗೆ ಕ್ರಮ ವಹಿಸದೆ ಇರುವುದು ಹುಣಸೂರಿನ ತಾಲೂಕು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಕ್ಕದ ಕೆ ಆರ್ ನಗರದ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಿ ಅದನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸದಿದ್ದಲ್ಲಿ ನಗರಸಭೆಯ ಮುಂಭಾಗದಲ್ಲಿ ಸಾರ್ವಜನಿಕರೊಂದಿಗೆ ಸತ್ಯ ಎಂಎ ಎಸ್ ಫೌಂಡೇಶನ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ



