ಚಲಿಸುತ್ತಿದ್ದ ಬೈಕ್ ವೊಂದು ದಿಢೀರ್ ಆಗಿ ರಸ್ತೆಗೆ ಅಡ್ಡ ಬಂದು ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪ ತಾರೆಕುಡ್ಲುನಲ್ಲಿ ಸಂಭವಿಸಿದೆ.

ಮೃತಪಟ್ಟ ಬೈಕ್ ಸವಾರ ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (23) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಸಹಸವಾರ ವಿಶ್ಲೇಶ್ ಎಂದು ತಿಳಿದು ಬಂದಿದೆ. ಇವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ನೇಹಿತರು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ದೊಡ್ಡ ಕಡವೆಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.

ಶಂಕರನಾರಾಯಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ



