ನಮ್ಮ ದೇಶದ ಕಾನೂನು ವ್ಯವಸ್ಥೆ ಹದಗೆಟ್ಟು ಹಿಪ್ಪೆಯಾಗಿರುವುದಕ್ಕೆ ಪ್ರತ್ಯೇಕ ವರ್ಣನೆ ಕೊಡಬೇಕಾಗಿಲ್ಲ. ನಮ್ಮಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕಾದರೆ ದೂರುದಾರ ವರ್ಷಗಟ್ಟಲೆ ಕೋರ್ಟು ಕಚೇರಿ ಎಂದೆಲ್ಲ ಅಲೆದಾಡಿ, ಕಡೆಗೆ ಅಪರಾಧಿಗೆ ಶಿಕ್ಷೆಯಾಗುವ ಭರವಸೆಯನ್ನೇ ಕಳೆದುಕೊಂಡು ಕೇಸನ್ನು ಹಿಂಪಡೆಯುವ ಮನಸ್ಥಿತಿಗೆ ತಲುಪುವುದು ನಮ್ಮ ಕಾನೂನು ವ್ಯವಸ್ಥೆಯ ಬಹುದೊಡ್ಡ ದುರಂತವೇ ಸರಿ.
ನಮ್ಮ ನ್ಯಾಯಾಲಯಗಳು ಸಾಕ್ಷಿಯ ಮೂಲ ಹುಡುಕಿ ಹತ್ತಾರು ವರ್ಷ ಕೇಸ್ ಮುನ್ನಡೆಸಿ ನ್ಯಾಯ ಕೊಡಿಸುವ ಹೊತ್ತಿಗೆ ದೂರುದಾರನಲ್ಲಿ ನ್ಯಾಯದ ದಾಹ ಬಹುತೇಕ ಕರಗಿಹೋಗಿ, ಒಮ್ಮೆ ಈ ಜಂಜಾಟಗಳಿ0ದ ಹೊರಬಂದರೆ ಸಾಕು ಎಂಬ ಮನಸ್ಥಿತಿ ಮೈಗೂಡಿರುತ್ತದೆ. ನಿಜವಾದ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ನೀಡುವಲ್ಲಿ ನಮ್ಮ ನ್ಯಾಯಾ0ಗ ವ್ಯವಸ್ಥೆ ನಿರಂತರವಾಗಿ ಎಡವುತ್ತಲೇ ಬಂದಿದೆ. ಇದರಿಂದ ಅಪರಾಧಿಗಳಲ್ಲಿ ಕಾನೂನಿನ ಭಯ ಮರೆಯಾಗಿದೆ ಅಲ್ಲದೇ ಮತ್ತಷ್ಟು ಅಮಾನವೀಯ ಕೃತ್ಯಗಳನ್ನ ಮಾಡಲು ನಮ್ಮ ಸಡಿಲ ಕಾನೂನು ವ್ಯವಸ್ಥೆಯೇ ಅವರನ್ನ ಪ್ರೇರೇಪಿಸಿದೆ. ಒಂದು ವೇಳೆ ಅಪರಾಧಿಗಳಿಗೆ ಜೈಲು ಶಿಕ್ಷೆಯಾದರೂ ಕೂಡ ಅಲ್ಲಿಯೂ ಅವರಿಗೆ ರಾಜಾತಿತ್ಯವಿದೆ. ಮೂರು ಹೊತ್ತು ಊಟ, ಕಣ್ಣು ತುಂಬ ನಿದ್ದೆ, ಅಲ್ಲದೇ ದಿನ ಲೆಕ್ಕದಲ್ಲಿ ಸಂಬಳ ಹೀಗೆ ಅಪರಾಧಿಗಳಿಗೆ ಹೊರ ಪ್ರಪಂಚ ಮತ್ತು ಜೈಲು ಎರಡು ಒಂದೇ ಎಂಬ0ತಾಗಿದೆ. ಇನ್ನು ಅಪರಾಧಿ ಕೊಂಚ ಪ್ರಭಾವಿಯಾಗಿದ್ದರಂತೂ ಕೇಳುವುದೇ ಬೇಡ, ತನ್ನ ಪ್ರಭಾವದ ದರ್ಪದಿಂದ ಅದೇಗೋ ನ್ಯಾಯ ದೇವತೆಯ ಕುರುಡು ಕಣ್ಣನ್ನ ಮತ್ತಷ್ಟು ಕುರುಡಾಗಿಸಿ ಶಿಕ್ಷೆಯಿಂದ ಪಾರಾಗುತ್ತಾನೆ.
ಇಂತಹ ಪ್ರಭಾವಿ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಿಗಿಯಾಗಿ ಬಂಧಿಸಿ ಅವರ ತಪ್ಪಿಗೆ ತಕ್ಕ ಶಿಕ್ಷೆ ನೀಡಿದಾಗ ಇತರ ಅಪರಾಧಿಗಳಲ್ಲಿ ಸಾಮಾನ್ಯವಾಗಿ ಕಾನೂನಿನ ಬಗ್ಗೆ ಭಯ ಮೈಗೂಡುತ್ತದೆ. ಅಂತಹ ಪ್ರಭಾವಿಗೆಯೇ ಇಂತಹ ಘೋರ ಶಿಕ್ಷೆ ವಿಧಿಸಿರುವ ಕಾನೂನು ನಮ್ಮಂತಹ ಸಾಮಾನ್ಯರು ತಪ್ಪು ಮಾಡಿದರೆ ಸುಮ್ಮನೆ ಬಿಡುವುದೇ? ಎಂಬ ಭಯ ಅಪರಾಧಿಗಳಲ್ಲಿ ಮೂಡುವಂತಾದಾಗ ಮಾತ್ರ ನಮ್ಮ ಕಾನೂನು ವ್ಯವಸ್ಥೆ ಬಲಗೊಳ್ಳುವುದು. ಇದಕ್ಕೆ ಸೂಕ್ತ ನಿದರ್ಶನ ಇತ್ತೀಚಿಗೆ ಸದ್ದು ಮಾಡುತ್ತಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ಸ್ಟಾರ್ ನಟ ದರ್ಶನ್ ಒಂದೊಮ್ಮೆ ಹೈ ಕೋರ್ಟ್ ನಿಂದ ಬೇಲ್ ಪಡೆದು ಸುಲಭವಾಗಿ ಹೊರಬಂದಿದ್ದರು. ಅಲ್ಲದೇ ಜೈಲು ವಾಸದ ಸಂಧರ್ಭದಲ್ಲಿ ಅವರಿಗೆ ಜೈಲಿನೊಳಗೆ ಲಕ್ಷುರಿ ಲೈಫ್ ಲೀಡ್ ಮಾಡಲು ಅವಕಾಶ ಮಾಡಿಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ದರ್ಶನ್‌ಗಿದ್ದ ಪ್ರಭಾವ ಮತ್ತು ಸಾಮರ್ಥ್ಯದಿಂದ ಸ್ಪಷ್ಟ ಸಾಕ್ಷ್ಯಗಳಿದ್ದ ಪ್ರಕರಣದಲ್ಲೂ ಕೂಡ ಅವರಿಗೆ ಹೈಕೋರ್ಟ್ ಸುಲಭವಾಗಿ ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆಯ ನಂತರ ವಿದೇಶ ಪ್ರವಾಸ ಕೈಗೊಳ್ಳಬಾರದು ಎಂಬ ಹೈಕೋರ್ಟ್ ಆದೇಶವನ್ನ ಗಾಳಿಗೆ ತೂರಿ ದರ್ಶನ್ ವಿದೇಶದಲ್ಲಿ ಚಿತ್ರೀಕರಣದಲ್ಲೂ ಕೂಡ ಭಾಗಿಯಾಗಿದ್ದರು. ಇದರಿಂದ ಜನರಲ್ಲಿ ಹೈಕೋರ್ಟ್ ನ ನ್ಯಾಯ ಪರ ನಿಲುವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿತ್ತು. ಇನ್ನೇನೂ ದರ್ಶನ್ ತನ್ನ ಪ್ರಭಾವದಿಂದ ಕಾನೂನಿಗೆ ಚಳ್ಳೆ ಹಣ್ಣು ತಿನ್ನಿಸಿ ಈ ಪ್ರಕರಣದಿಂದ ಹೊರಬಂದರು ಅನ್ನುವಷ್ಟರಲ್ಲಿ, ಅವರ ಜಾಮೀನು ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿತ್ತು. ಸದ್ಯ ಸುಪ್ರೀಂ ವಿಚಾರಣೆ ಚಾಲ್ತಿಯಲ್ಲಿರುವ ಈ ಸಂಧರ್ಭದಲ್ಲಿ ಜೈಲು ಸೇರಿರುವ ದರ್ಶನ್ ಗೆ ಯಾವುದೇ ಸೌಲಭ್ಯಗಳಿಲ್ಲದ ಬಿಗಿ ಜೈಲು ಶಿಕ್ಷೆಯ ದರ್ಶನವಾಗುತ್ತಿದೆ. ಬಿಗಿ ಜೈಲು ಶಿಕ್ಷೆಯ ಪರಿಣಾಮ ದರ್ಶನ್ ಸುಪ್ರೀಂ ಕೋರ್ಟ್ ಮುಂದೆಯೇ “ಈ ರೀತಿಯ ಶಿಕ್ಷೆಗಿಂತ ನನಗೆ ವಿಷ ಕೊಡಿ “ಎಂದು ಅಂಗಲಾಚಿದ್ದರು. ನನ್ನ ಪ್ರಕಾರ ದರ್ಶನ್ ರವರ ಈ ಹೇಳಿಕೆಯನ್ನ ಮಾಧ್ಯಮಗಳು ವೈಭವೀಕರಿಸಬೇಕು ಅಲ್ಲದೇ ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಡಬೇಕು. ಇದರಿಂದ ಜನರಲ್ಲಿ ಕಾನೂನಿನ ಬಗೆ ಸಹಜವಾಗಿ ಭಯ ಮೈಗೂಡುತ್ತದೆ ಮತ್ತು ಅಪರಾಧಗಳನ್ನು ಮಾಡದೇ ಇರುವಂತೆ ಪ್ರೇರೇಪಿಸುತ್ತದೆ. ಇಂತಹ ಪ್ರಭಾವಿಗಳ ತಪ್ಪಿಗೆ ನಮ್ಮ ವ್ಯವಸ್ಥೆಯಲ್ಲಿ ತಕ್ಕ ಶಿಕ್ಷೆಯಾದಾಗ ಮಾತ್ರ ಕಾನೂನಿನ ಮೇಲೆ ಭಯ, ಭಕ್ತಿ, ಗೌರವ ಹೀಗೆ ಎಲ್ಲವೂ ಹುಟ್ಟಲು ಸಾದ್ಯ. ಇಂತಹ ಘಟನೆಗಳು ನಮ್ಮ ದೇಶದ ಕಾನೂನಿನ ನ್ಯಾಯ ಪರ ನಿಲುವಿನ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸಬೇಕು. ಅಪರಾಧ ಮಾಡಲು ಹೊರಡುವ ಪ್ರತಿಯೊಬ್ಬರಿಗೂ ದರ್ಶನ್ ಗೆ ಬಂದೊದಗಿರುವ ಪರಿಸ್ಥಿತಿ ನಿದರ್ಶನವಾಗಬೇಕು.
ಚೇತನ್ ಕಾಶಿಪಟ್ನ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…