ತೆನೆ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಕನ್ಯಾ ಸಂಕ್ರಮಣದ ಮರುದಿನ ಸಿಂಗುಡೆಯ ದಿನ ಪೂರ್ವ ಸಂಪ್ರದಾಯದಂತೆ ಭೂ ಕೈಲಾಸ ಕ್ಷೇತ್ರ ಕಾರಿಂಜ ಕ್ಷೇತ್ರದಿಂದ ಶ್ರೀ ದೇವರು ವಿವಿಧ ಕಟ್ಟೆಗಳಿಗೆ ಆಗಮಿಸಿ ಪೂಜೆಯನ್ನು ಪಡೆದು ಕೊನೆಗೆ ಸರಪಾಡಿ ಗ್ರಾಮದ ಹಲ್ಲಂಗಾರು ಕಟ್ಟೆಯಲ್ಲಿ ದೇವರ ದರ್ಶನ ಬಲಿ ಸಹಿತ ವಿಶೇಷ ಪೂಜೆ ನಡೆದು ಭತ್ತದ ತೆನೆಯನ್ನು ಕೊಂಡೊಯ್ಯಲಾಗಿದೆ.

ಜೈನ ಮನೆತನದ ಲೀಲಾವತಿ ಅಮ್ಮನವರಿಗೆ ಸೇರಿದ ಕಂಬಳದ ಗದ್ದೆಯಲ್ಲಿ ಬಂಗಾರದ ತೆನೆ ಬೆಳೆದಿದೆ ಎಂಬ ನಂಬಿಕೆ ಇದ್ದು, ಇಲ್ಲಿಂದ ತೆನೆಗಳನ್ನು ಪಡೆದು ಕಾರಿಂಜದಲ್ಲಿ ಸಂಪ್ರದಾಯಗಳು ನೆರವೇರಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.

ಜತೆಗೆ ಪ್ರತಿ ಕಟ್ಟೆಗಳು ಸಹಿತ ಹಲ್ಲಂಗಾರು ಕಟ್ಟೆಯಲ್ಲೂ ಹೆಚ್ಚಿನ ಭಕ್ತರು ಸೇರಿ ತೆನೆಗಳನ್ನು ಪಡೆದು ಮನೆ ತುಂಬಿಸಿಕೊಂಡು ಹೊಸ ಅಕ್ಕಿ ಊಟ ಮಾಡುವ ಕಾರ್ಯ ನಡೆಸಿದ್ದಾರೆ.



