ದೇವಾಲಯದ ಸಿಬ್ಬಂದಿ ಮದ್ಯಪಾನ ಮಾಡಿ ಬಿಕ್ಷುಕಿ ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಪ್ರತಿನಿತ್ಯ ದೇವಸ್ಥಾನದ ಆವರಣದಲ್ಲೇ ಇರುತ್ತಿದ್ದ ಈ ಬಿಕ್ಷುಕಿ ಮಹಿಳೆ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ಇರುತ್ತಿದ್ದರು. ಮಹಿಳೆಗೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ ಸಿಬ್ಬಂದಿ, ನಿನ್ನೆ ಮಧ್ಯಾಹ್ನ ಮತ್ತೆ ಹಲ್ಲೆ ನಡೆಸಿದ್ದಾನೆ. ಈ ಸಂಬ0ಧ ಬಿಕ್ಷುಕಿ ಮಹಿಳೆ ಪೋಲೀಸ್ ಠಾಣೆಗೆ ದೂರು ನೀಡಲು ಹೋರಟಿದ್ದು, ಆದರೆ ಪೊಲೀಸರು ನಿರ್ಲಕ್ಷ್ಯತನ ತೋರಿಸಿದ್ದಾರೆ. ಹಲ್ಲೆ ಆರೋಪಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಮಾಡಿದ್ದು, ದೇವಸ್ಥಾನದಲ್ಲಿ ಮದ್ಯಪಾನ ಮಾಡಿದ ಸಿಬ್ಬಂದಿಯನ್ನೂ ಕರ್ತವ್ಯದಿಂದ ಕೈ ಬಿಡಲು ಆಗ್ರಹಿಸಿದ್ದಾರೆ. ಇನ್ನು ಹಲ್ಲೆಗೊಳಗಾದ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.



