ಜನ ಮನದ ನಾಡಿ ಮಿಡಿತ

Advertisement

ಮೊಡಂಕಾಪು: ದಶಮಾನೋತ್ಸವ ಪ್ರಯುಕ್ತ ಮೊಡಂಕಾಪಿನಲ್ಲಿ ಕೃಷಿ ಮಾಹಿತಿ ಶಿಬಿರ

ಸಂತ ಕ್ರಿಸ್ಟೋಪರ್ ಎಸೋಸಿಯೇಶನ್ (ರಿ) ಬಂಟ್ವಾಳ ಮೊಡಂಕಾಪು ಮತ್ತು ತೋಟಗಾರಿಕಾ ಇಲಾಖೆ – ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ  ಸಂತ ಕ್ರಿಸ್ಟೋಪರ್ ಎಸೋಸಿಯೇಶನ್ ಇದರ  ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಪೈಕಿ  ಸಮಗ್ರ ಕೃಷಿ ಮಾಹಿತಿ ಶಿಬಿರವೂ ಒಂದಾಗಿದ್ದು,  ಇದನ್ನು ೨೮ .೦೯ .೨೦೨೫ ರಂದು ಬೆಳಿಗ್ಗೆ ಇನ್ಫೆಂಟ್ ಜೀಸಸ್ ಚರ್ಚ್  ಸಭಾಂಗಣದಲ್ಲಿ  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.  

ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸದಸ್ಯರಾದ ಶ್ರೀ ರಾಮಕೃಷ್ಣ ಆಳ್ವಾರವರು ಮುಖ್ಯ ಅತಿಥಿಯಾಗಿದ್ಧರು. ಇನ್ಫೆಂಟ್  ಜೀಸಸ್ ಚರ್ಚಿನ ಪ್ರಧಾನ   ಧರ್ಮಗುರುಗಳಾದ ಫಾI ವಿಕ್ಟರ್ ಡಿಸೋಜಾ  ಶಿಬಿರಾರ್ಥಿಗಳನ್ನು  ಉದ್ದೇಶಿಸಿ ಮಾತನಾಡಿ, ಕೃಷಿಕರು ವಾಣಿಜ್ಯ ಬೆಳೆಗಳೊಂದಿಗೆ  ಮಿಶ್ರ ಬೆಳೆ ಹಾಗೂ  ಸಾವಯವ ಕೃಷಿ ಮಾಡಿ ಮಾರುಕಟ್ಟೆ ಗಳಿಸುವುದು ಈಗಿನ ಆದ್ಯತೆಯಾಗಬೇಕಾಗಿದೆ  ಎಂದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ  ಶ್ರೀ ಜೋ ಪ್ರದೀಪ್ ಡಿ’ಸೋಜ,  ಹಿರಿಯ ಸಹಾಯಕ ನಿರ್ದೇಶಕರು,  ತೋಟಗಾರಿಕಾ ಇಲಾಖೆ,  ಬಂಟ್ವಾಳ ಇವರು ಅಡಿಕೆ ಬೆಳೆಯುವ ವಿಧಾನ, ನೀರಾವರಿ , ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗಭಾದೆ ಮತ್ತು ನಿಯಂತ್ರಣ, ಅಡಿಕೆಯೊಂದಿಗೆ ಮಿಶ್ರಕೃಷಿ  ಹಾಗೂ ರೈತರಿಗೆ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಮುಂತಾದ  ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು.

ನೂರಕ್ಕೂ  ಮಿಕ್ಕಿ ಕೃಷಿಕರು ಮಾಹಿತಿಯನ್ನು ಪಡೆದರು.  ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಸಂಘಟನೆ ವತಿಯಿಂದ ಮಾಡಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ಸಂತ ಕ್ರಿಸ್ಟೋಪರ್ ಎಸೋಸಿಯೇಶನ್ (ರಿ) ಬಂಟ್ವಾಳ ಮೊಡಂಕಾಪು ಘಟಕದ ದಶಮಾನೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಸಂದೀಪ್ ಮಿನೆಜಸ್, ಕಾರ್ಯದರ್ಶಿಯಾದ ಶ್ರೀ ಅವಿಲ್ ಲುವಿಸ್, ಕೋಶಾಧಿಕಾರಿಯಾದ ಶ್ರೀ ರಿಚರ್ಡ್ ಪಾಸ್ಕಲ್ ಡಿಸೋಜಾ,ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಐವನ್ ಡಿಸೋಜಾ ಹಾಗೂ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸುನಿಲ್ ವೇಗಸ್ ಉಪಸ್ಥಿತರಿದ್ದರು. ರಾಷ್ಟ್ರ ಗೀತೆಯೊಂದಿಗೆ  ವಿಚಾರ ಸಂಕಿರಣವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!