ಲಯನ್ಸ್ ಕ್ಲಬ್ ವಿಟ್ಲ, ಇದರ ಆಶ್ರಯದಲ್ಲಿ ಇಂದು ಕಾರ್ಗಿಲ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿರುವ ನಮ್ಮ ಲಯನ್ ಸದಸ್ಯರಾದ ಲಯನ್ ಬಾಲಕೃಷ್ಣ ಗೌಡ, ಲಯನ್ ಡೇವಿಡ್ ವೇಗಸ್, ಲಯನ್ ಥೋಮಸ್ ಡೇನಿಸ್ ಲೋಬೋ ಇವರನ್ನು ನಮ್ಮ ಲಯನ್ಸ್ ಭವನದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ನಂತರ ನಿವೃತ್ತ ಯೋಧ ಬಾಲಕೃಷ್ಣ ರೈ ಹಾಗೂ ಚೇತನಾ ಶೆಟ್ಟಿ ಇವರ ಮನೆಗೆ ಹೋಗಿ ದಂಪತಿಗಳನ್ನು ಶಾಲು ಹೊದಿಸಿ, ಹಾರ ಹಾಕಿ, ಫಲ-ಪುಷ್ಪ ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷರಾದ ಲಯನ್ ಜಲಜಾಕ್ಷಿ ಬಾಲಕೃಷ್ಣ ವಹಿಸಿದ್ದರು. ಹಿರಿಯ ಸದಸ್ಯರಾದ ಲಯನ್ ಮಂಗೇಶ್ ಭಟ್ ವಿ. ಹಾಗೂ ಜಿಲ್ಲಾ ಪೂರ್ವ ಗವರ್ನರ್ ಆದ ಲಯನ್ ಡಾ. ಗೀತಪ್ರಕಾಶ್ ಇವರು ಕಾರ್ಗಿಲ್ ನ ಬಗ್ಗೆ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷರಾದ ಲಯನ್ ಸುದೇಶ್ ಭಂಡಾರಿ, ಕಾರ್ಯದರ್ಶಿ ಲಯನ್ ಪುಷ್ಪಲತಾ, ಲಯನ್ ಸಂತೋಷ್ ಕುಮಾರ್ ಶೆಟ್ಟಿ, ಅರವಿಂದ ರೈ, ಮೌರ್ಯ ಶೆಟ್ಟಿ, ಲಿಯೋ ಅನಘ ಉಪಸ್ಥಿತರಿದ್ದರು. ಕೋಶಾಧಿಕಾರಿ ಲಯನ್ ಮುರಳಿ ಪ್ರಸಾದ್ ವಂದನಾರ್ಪಣೆ ಗೈದರು.








