ಮಂಗಳೂರು: ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಸಾಕು ನಾಯಿಗೆ ವಿಷ ನೀಡಿ ಕೊಂದಿದ್ದಾರೆ ಎಂದು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಾಪಿಕಾಡ್ 4 ನೇ ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ ನಾಲ್ಕುವರೆ ವರ್ಷದ ಡಾಬರ್ ಮ್ಯಾನ್ ನಾಯಿ ವಿಷದ ಪದಾರ್ಥ ಸೇವಿಸಿ ಮೃತಪಟ್ಟಿದೆ.

ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಪದಾರ್ಥವನ್ನು ಹಾಕಿದ್ದಾರೆ. ಇದರ ಪರಿಣಾಮ ಜು.25 ರಂದು ನಾಯಿ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದೆ. ಈ ಪ್ರಕರಣಕ್ಕೆ ಕಾರಣರಾಗಿರುವ ನೆರೆಮನೆಯ ಭೀಮಯ್ಯ ಅವರ ವಿರುದ್ದ ಸಾಕು ನಾಯಿಯ ಮಾಲಕ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



