ಪುತ್ತೂರಿನಲ್ಲಿ ಹಿರಿಯ ಜವುಳಿ ಉದ್ಯಮಿಯಾಗಿದ್ದ ಹೆಚ್.ನಾರಾಯಣ ಅವರ ಮಗ ಹೆಬ್ಬಾರಬೈಲು ನಿವಾಸಿ ತಾರನಾಥ್ ಹೆಚ್.(49ವ.)ರವರು ಹೃದಯಾಘಾತದಿಂದಾಗಿ ಅ.13ರಂದು ರಾತ್ರಿ ನಿಧನರಾದರು.

ಆರಂಭದಲ್ಲಿ ತಂದೆ, ಸಹೋದರರ ಜೊತೆ ಹೆಚ್.ನಾರಾಯಣ ಆಂಡ್ ಸನ್ಸ್ ಜವುಳಿ ಮಳಿಗೆಯಲ್ಲಿಯೇ ವ್ಯವಹಾರ ನಿರತರಾಗಿದ್ದ ಅವರು ಇತ್ತೀಚಿನ ಕೆಲ ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡಿಕೊಂಡಿದ್ದರು. ಅ.13ರಂದೂ ಎಂದಿನAತೆ ಪಿಗ್ಮಿ ಸಂಗ್ರಹಣೆ ಮಾಡಿದ್ದ ಅವರಿಗೆ ರಾತ್ರಿ ವೇಳೆ ದಿಢೀರ್ ಎದೆನೋವು ಕಾಣಿಸಿಕೊಂಡಿತೆಂದು ಕೂಡಲೇ ಮನೆಯವರು ಆಸ್ಪತ್ರೆಗೆ ಕರೆತಂದರಾದರೂ ಫಲಕಾರಿಯಾಗಲಿಲ್ಲ. ಕಳೆದ 9 ವರ್ಷಗಳಿಂದ ಪುತ್ತೂರಿನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಸುದಾನದಲ್ಲಿ ಶಿಕ್ಷಕಿಯಾಗಿರುವ ಪತ್ನಿ ವಿನುತಾ ಹಾಗೂ ಇಬ್ಬರು ಮಕ್ಕಳು, ಮಾಜಿ ಪುರಸಭೆಯ ಉಪಾಧ್ಯಕ್ಷರಾಗಿರುವ ಸಹೋದರ ಹೆಚ್.ಉದಯ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



