ಮನೆಯೊಂದರ ಗೋಡೆಯ ಮೇಲೆ ಬಂಡೆಕಲ್ಲು ಬಿದ್ದು ಹಾನಿಯಾದ ಘಟನೆ ನಡೆದಿದೆ.

ಸುರಿದ ಮಿಂಚು ಸಿಡಿಲು ಮಳೆಗೆ ಅಮ್ಟಾಡಿ ಗ್ರಾಮದ ಪಡಾಮಕಿಲಮಾರ್ ಎಂಬಲ್ಲಿ ರವೀಂದ್ರ ಎಂಬವರ ವಾಸ್ತವ್ಯದ ಮನೆಯ ಹಿಂಬದಿಯಲ್ಲಿನ ಗುಡ್ಡದಿಂದ ಪಾದೆಕಲ್ಲು ಒಡೆದು ಉರುಳಿ ಬಿದ್ದಿದ್ದು, ಮಣ್ಣಿನ ಗೋಡೆಯ ಮನೆಯಾಗಿರುವುದರಿಂದ ಗೋಡೆಗೆ ಹಾನಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ.



