ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ “ಗಡಿನಾಡ ಉತ್ಸವ -2025” ಕಾರ್ಯಕ್ರಮವು ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ನಡೆಯಲಿದೆ.
ಸಂಜೆ ನಾಲ್ಕು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸನ್ಮಾನ ನಂತರ ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ, ಗಾಯಕ ಗಾಯಕಿಯರಿಂದ ಸಂಗೀತ ಸುಧೆ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತಂಡದವರಿಂದ ಗಡಿನಾಡ ಯಕ್ಷ ಕವಿ ಪಾರ್ತಿಸುಬ್ಬ ವಿರಚಿತ ಶ್ರೀ ಕೃಷ್ಣ ಬಾಲಲೀಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ ಎಂಟು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರದ ಅಧ್ಯಕ್ಷರಾದ ಸೋಮನ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ರಾಜ್ಯ ಹೆಲ್ತ್ ಕೌನ್ಸಿಲ್ ನ ಅಧ್ಯಕ್ಷರಾದ ಡಾ.ಯು.ಟಿ.ಇಪ್ತಿಕಾರ್ ಅಲಿ, ಕಾಸರಗೋಡಿನ ಶಾಸಕರಾದ ಎನ್.ಎ ನೆಲ್ಲಿಕುನ್ನು, ಮಂಜೇಶ್ವರದ ಶಾಸಕರದ ಎ.ಕೆ.ಎಂ.ಅಶ್ರಪ್ ಮತ್ತು ಊರಿನ ಹಾಗೂ ಯುಎಇ ಉದ್ಯಮಿಗಳು ಉಪಸ್ಥಿತರಿರುವರು.
ಸಾಮಾಜಿಕ ಕೈಂಕರ್ಯಗಳನ್ನು ಮಾಡಿಕೊಂಡು ಬಂದಿರುವ ಮಂಗಳೂರಿನ ಉದ್ಯಮಿ ಕಟಪಾಡಿ ಸತ್ಯೆಂದ್ರ ಪೈ,ಕ್ರೀಯೆಟಿವ್ ಕ್ಯಾಟರ್ ಹಾಸ್ಪಿಟಲಿಟಿನ ಆಡಳಿತ ನಿರ್ದೇಶಕರಾದ ಮಂಜುನಾಥ ರಾಜನ್, ಕರ್ನಾಟಕ ಜಾನಪದ ಪರಿಷತ್ ಒಮಾನ್‌ನ ಅಧ್ಯಕ್ಷರಾದ ಶಿವಾನಂದ ಕೋಟ್ಯಾನ್ ಕಟಪಾಡಿ ಇವರಿಗೆ ಸಾಧಕ ಗೌರವ ಪ್ರಶಸ್ತಿ ನೀಡಲಾಗುವುದು. ಸಾಧಕ ಸಂಸ್ಥೆ ದುಬೈನಲ್ಲಿ ಕಳೆದ ಹಲವಾರು ವರ್ಷಗಳಿಂದ ಕನ್ನಡದ ವಿದ್ಯಾರ್ಥಿಗಳಿಗೆ ನಮ್ಮ ಮಾತೃ ಭಾಷೆಯ ಕಲಿಕಾ ತರಗತಿಯನ್ನು ಉಚಿತವಾಗಿ ನೀಡುತ್ತಿರುವ “ಕನ್ನಡ ಪಾಠ ಶಾಲೆ ದುಬೈ” ಸಂಸ್ಥೆಯನ್ನು ಗೌರವಿಸಲಾಗುವುದು. ಇನ್ನು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಾಲ್ಕು ಮಂದಿ ಸಾಧಕರಾದ ಉದ್ಯಮಿ ಪ್ರಕಾಶ್ ಕುಂಪಲ, ಬಿ.ಎಂ ಗ್ರೂಪ್ ಮತ್ತು ರೇಡಿಯೋ ಜಿಲ್ಲಿನ ಆಡಳಿತ ನಿರ್ದೇಶಕರಾದ ಡಾ.ಕನಕರಾಜ್, ಹೋಟೆಲ್ ಉದ್ಯಮಿ ಸಂದೀಪ್ ಶೆಟ್ಟಿ, ಮ್ಯಾಕ್ಸ್ ಕ್ಯಾರ್ ಕ್ಲಿನಿಕ್ ದುಬೈ ಆಡಳಿತ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್ ರವರನ್ನು “ಗಡಿನಾಡ ರತ್ನ -2025” ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು…