ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.

ದ.ಕ.ಜಿಲ್ಲೆಯ ಶ್ರೀರಾಮ ಯಜ್ಞ ಯಕ್ಷ ಅಭಿಯಾನ ತಂಡದಿಂದ ಸೇವೆಯ ರೂಪದಲ್ಲಿ ಪ್ರದರ್ಶನಗೊಂಡಿರುವುದು ಕರ್ನಾಟಕ ರಾಜ್ಯಕ್ಕೆ ಹಿರಿಮೆಯನ್ನು ತಂದಿದೆ. ಆಯೋಧ್ಯೆ ಯಕ್ಷ ಯಾತ್ರೆಯ ಪ್ರಯುಕ್ತವಾಗಿ ತಂಡದ ಅಧ್ಯಕ್ಷ ಡಿ.ಮನೋಹರ ಕುಮಾರ್ ನೇತ್ರತ್ವದಲ್ಲಿ ಆಯೋಧ್ಯೆ ಟ್ರಸ್ಟಿಯಾಗಿರುವ ಗೋಪಾಲ ಜೀ ಅವರ ಸಹಕಾರದಿಂದ ಪ್ರಥಮ ಬಾರಿಗೆ ಆಯೋಧ್ಯೆಯಲ್ಲಿ “ಶ್ರೀ ರಾಮ ಚರಿತ” ಎಂಬ ಯಕ್ಷಗಾನದ ಪ್ರದರ್ಶನಗೊಂಡಿದ್ದಲ್ಲದೆ ಆಯೋಧ್ಯೆಯ ಜನತೆಗೆ ಯಕ್ಷಗಾನದ ಅಭಿರುಚಿಯ ಪರಿಚಯ ಮಾಡಿದ್ದಾರೆ ಎಂಬ ಹೆಗ್ಗಳಿಕೆ ಇವರದು. ಆಯೋಧ್ಯೆ ಯಕ್ಷ ಯಾತ್ರೆಯ ಸದುದ್ದೇಶದಿಂದ ಇಡೀ ತಂಡ ಅವಿಭಜಿತ ದ.ಕ.ಜಿಲ್ಲೆಯ 14 ಕಡೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಯಕ್ಷಾಭಿಮಾನಿಗಳ ಸಹಕಾರದೊಂದಿಗೆ “ಶ್ರೀರಾಮನ ಚರಿತ್ರೆಯ” ಯಕ್ಷಗಾನದ ಪ್ರದರ್ಶನವನ್ನು ಮಾಡಿದ್ದು. 15 ನೇ ಯಕ್ಷಗಾನ ಸೇವೆಯಾಟ ಆಯೋಧ್ಯೆ ಶ್ರೀರಾಮನ ಪುಣ್ಯ ಭೂಮಿಯಲ್ಲಿ ಪ್ರದರ್ಶನವಾಗಿದೆ.



