ವಿದ್ಯಾಗಿರಿ: ‘ಮಾಧ್ಯಮದಲ್ಲಿ ವೃತಿ ಬದುಕು ಕಂಡುಕೊಳ್ಳುವವರಿಗೆ ಸ್ವಚ್ಛ ಮನಸ್ಸು ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶಿಕ್ಷಕ- ರಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ. ನಿರ್ಮಲ ಮನಸ್ಸಿನಿಂದ ಸಮಾಜದ ಸ್ವಾಸ್ಥ್ಯತೆ ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತ ಹೊಂದಿರಬೇಕು. ಪತ್ರಕರ್ತನ ಕರ್ತವ್ಯದಲ್ಲಿ ಒಳಿತು- ಕೆಡುಕುಗಳೆರಡೂ ಅಡಕವಾಗಿದೆ ಎಂದರು. ವಿದ್ಯಾರ್ಥಿ ಮೇಲೆ ಶಿಕ್ಷಕರು ತೋರಿಸುವ ವಿಶ್ವಾಸವು, ಆ ವಿದ್ಯಾರ್ಥಿ ನಂಬಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಳ್ವಾಸ್ ಎಂದರೆ ವಿದ್ಯಾಸಾಗರ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವೂ ಅಧಿಕ. ತಮ್ಮ ಮನೆಯ ಮಕ್ಕಳು ಆಳ್ವಾಸ್‌ನಲ್ಲಿ ಕಲಿಯಬೇಕು ಎಂಬ ಹಂಬಲ ಹಲವರದ್ದು ಎಂದರು. ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾರ್ಥಿಗಳ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿದ ಪೋಷಕರಾದ ನೀವೆಲ್ಲರೂ ಧನ್ಯರು ಎಂದರು.



