ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ.

ಆರ್ಥಿಕ ಕಾರಣಗಳಿಂದ ಎಳೆ ವಯಸ್ಸಿನಲ್ಲಿಯೇ ದುಡಿಮೆಯನ್ನು ರೂಢಿಸಿಕೊಂಡಿದ್ದ ನಾಗರಾಜ್ ಸ್ಥಳೀಯ ದೃಶ್ಯ ಮಾಧ್ಯಮಗಳಲ್ಲಿ ಹಿರಿಯ ಕ್ಯಾಮರಾಮನ್ ಆಗಿ ಗುರುತಿಸಿಕೊಂಡಿದ್ದರು. ಅನೇಕ ಯುವ ಕ್ಯಾಮರಾಮನ್‌ಗಳಿಗೆ ಕ್ಯಾಮರಾ ಕೌಶಲ್ಯವನ್ನು ಕಲಿಸಿ ದುಡಿಮೆಯ ಹಾದಿ ತೋರಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ಮಂಗಳೂರಿನ ಮಾಧ್ಯಮ ಲೋಕ ಕಂಬನಿ ಮಿಡಿದಿದೆ.
 
								
 
															


