ಬಂಟ್ಸ್ ಸಂಘ ಅಹಮದಾಬಾದ್ ಸಂಸ್ಥೆಯು ತನ್ನ ಮೂವತ್ತ್ತೆರಡನೇ ವಾರ್ಷಿಕೋತ್ಸವ ಸಂಭ್ರಮ ಗುಜರಾತ್ ರಾಜ್ಯದಲ್ಲಿನ ಅಹಮದಾಬಾದ್ `ಸ್ಮಾರ್ಟ್ ಸಿಟಿ’ಯಲ್ಲಿನ ಗುಜರಾತ್ ವಿಶ್ವವಿದ್ಯಾಲಯದ ಶ್ಯಾಮ ಪ್ರಸಾದ್ ಮುಖರ್ಜಿ ಸಭಾಗೃಹದಲ್ಲಿ ನಡೆದಿದೆ.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿ ಸಮಾರಂಭಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಸಮಾಜದ ಮೇಲಿನ ಒಲವು ಬಂಟ ಬಲಾಢ್ಯತೆಗೆ ಪೂರಕವಾಗಿದೆ ಆದ್ದರಿಂದ ಸ್ವಸಮಾಜದ ಪರಸ್ಪರ ಪರಿಚಯ ಮಾಡಿಸಿಕೊಳ್ಳುವುದು ಅತ್ಯವಶ್ಯ. ಇದರಿಂದ ಸಮುದಾಯದ ಸಾಂಘಿಕತೆ ಸುಗಮವಾಗುವುದು. ಮನಸ್ಸಿನ ದುಃಖದುಮ್ಮಾನಗಳನ್ನು ಹಗುರಗೊಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು ಸಮರ್ಥ ಸಾರಥ್ಯವುಳ್ಳವರಿಂದ ಮಾತ್ರ ಸಂಘದ ಮುನ್ನಡೆ ಸಾಧ್ಯವಾಗುವುದು. ಜಾತೀಯ ಸಂಸ್ಥೆಗಳಿದ್ದಾಗಲೇ ಸಮುದಾಯದ ಉದ್ಧಾರ ಸಾಧ್ಯವಾಗುವುದು. ಬಂಟರು ಸಂಖ್ಯೆಯಲ್ಲಿ ಕಡಿಮೆಯಲ್ಲಿದ್ದರೂ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸಿ ವಿಶ್ವ ಮಾನ್ಯತೆಗೆ ಪಾತ್ರರಾದವರಲ್ಲಿ ಬಂಟರೇ ಶ್ರೇಷ್ಠರು ಎಂದು ತಿಳಿಸಿದ್ದಾರೆ. ಸಂಘದ ಕಲಾವಿದ ಮಕ್ಕಳು, ಮಹಿಳೆಯರು ಸಾಂಸ್ಕೃತಿಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕುಣಿತ ಭಜನೆ ನಡೆಸಿದ್ದು, ನಾಡಿನ ಹೆಸರಾಂತ ಪ್ಲೇಬ್ಯಾಕ್ ಗಾಯಕ, ಭಾರತೀಯ ಸಂಗೀತ ಲೋಕದ ಅತ್ಯುಜ್ವಲ ಯುವ ತಾರೆ, ಪ್ರಶಸ್ತಿ ವಿಜೇತ ನಿಶಾನ್ ರೈ ಅತ್ಯುತ್ತಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ.



