ಪಯ್ಯಂಬಳಂ ಬೀಚ್ ನಲ್ಲಿ ಸ್ನಾನ ಮಾಡಲು ಹೋದ ಕರ್ನಾಟಕ ಮೂಲದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಕೇರಳ ಕಣ್ಣೂರುನ ಪಯ್ಯಂಬಳಂ ಬೀಚ್ ನಲ್ಲಿ ನಡೆದಿದೆ.

ಮೃತರನ್ನು ಮೊಹಮ್ಮದ್ ಅಫ್ಘಾನ್, ಅಫ್ಘಾನ್ ಅಹ್ಮದ್ ಮತ್ತು ರೆಹಾಸುದ್ದೀನ್ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಫಾರ್ಮಸಿ ವಿದ್ಯಾರ್ಥಿಗಳು ಎನ್ನಲಾಗಿದೆ. ಮೃತ ವಿದ್ಯಾರ್ಥಿಗಳು ಚಿತ್ರದುರ್ಗ, ಹಾಸನ ಜಿಲ್ಲೆಯ ವಿದ್ಯಾರ್ಥಿಗಳೆಂಬ ಮಾಹಿತಿ ಲಭ್ಯವಾಗಿದೆ. 11 ಮಂದಿಯಿದ್ದ ತಂಡ ಸಮೀಪದ ರೆಸಾರ್ಟ್ಗೆ ಬಂದಿದ್ರು. 8 ಮಂದಿ ಸಮುದ್ರದಲ್ಲಿ ಸ್ನಾನಕ್ಕೆಂದು ಇಳಿದಿದ್ದಾಗ ಅಫ್ರಾಝ್ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಆತನ ರಕ್ಷಣೆಗೆ ಧಾವಿಸಿದ್ದ ಇಬ್ಬರು ಸೇರಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರೂ ನೀರುಪಾಲಾಗಿದ್ದಾರೆ. ಮೀನುಗಾರರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಹಕಾರದಿಂದ ಮೂವರ ಮೃತದೇಹ ಹೊರತೆಗೆದಿದ್ದಾರೆ.



