ಕಡಬ ನೂಜಿಬಾಳ್ತಿಲ ಗ್ರಾಮದ ಯುವಕನೋರ್ವ ಬೆಂಗಳೂರಿನ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ ಎಂದು ಗುರುತಿಸಲಾಗಿದೆ. ಅವರು ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆತಂಕ ಉಂಟುಮಾಡಿದೆ.



