ಮೊಯ್ದಿನ್ ಬಾವಾ ವಾಟ್ಸ್ ಅಪ್ ಹ್ಯಾಕ್ ಆಗಿದ್ದು ಕಾಂಟಾಕ್ಟ್ ಲಿಸ್ಟ್ನಲ್ಲಿರುವವರಿಂದ ಹ್ಯಾಕರ್ಸ್ ಹಣ ಕೇಳಿದ ಬಗ್ಗೆ ವರದಿಯಾಗಿದೆ.
ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ವಾಟ್ಸಪ್ ಅನ್ನು ಹ್ಯಾಕರ್ಸ್ ಹ್ಯಾಕ್ ಮಾಡಿ, ಹಲವಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಾವಾ ಅವರ ನಂಬರ್‌ನಿಂದಲೇ ಪತ್ರಕರ್ತರು, ಪೊಲೀಸರು, ಸೇರಿ ಅವರ ಕಾಂಟಾಕ್ಟ್ ಲಿಸ್ಟ್ನಲ್ಲಿರುವವರಿಗೆ ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಾವಾ ಅವರ ವಾಟ್ಸ್ ಆಪ್ ನಂಬರ್‌ನಿಂದ `ನಿಮ್ಮಿಂದ ನನಗೆ ಸಹಾಯ ಬೇಕು’ ಎಂಬ ಮೆಸೇಜ್ ಬಂದಿದ್ದು, ಬಾವಾ ಏನೋ ಕಷ್ಟದಲ್ಲಿದ್ದಾರೆ ಎಂದು, `ಏನಾಯ್ತು ಬಾವಾ?’ ಎಂದು ಕೇಳಿದಾಗ, ಇಂಗ್ಲೀಷ್‌ನಲ್ಲಿ ಕಂತೆ ಪುರಾಣಗಳನ್ನೆಲ್ಲಾ ಬಿಚ್ಚಿಟ್ಟು, ತನ್ನ ಮತ್ತೊಂದು ಯಪಿಐ ಐಡಿ ನೀಡಿ ಇದಕ್ಕೆ ಹಣ ಕಳಿಸುವುದು ಮಾತ್ರವಲ್ಲದೆ, ಅದರ ಸ್ಟ್ರೀನ್ ಶಾಟ್ ಕಳಿಸುವಂತೆಯೂ ಇಂಗ್ಲೀಷ್‌ನಲ್ಲಿ ಕೇಳಿದ್ದಾರೆ. ಇದನ್ನು ನೋಡಿ ಅಚ್ಚರಿಗೊಂಡು ಮೆಸೇಜ್ ಸ್ವೀಕರಿಸಿದವರು ಬಾವಾರಿಗೆ ನೇರ ಕರೆ ಮಾಡಿದಾಗ, ‘ನನ್ನ ನಂಬರ್ ಹ್ಯಾಕ್ ಆಗಿದೆ’ ಎಂದು ಬಾವಾ ದಿಗಿಲು ವ್ಯಕ್ತಪಡಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಸೆ.24ರಿಂದ ಈವರೆಗೆ ಕನಿಷ್ಠ…